Select Your Language

Notifications

webdunia
webdunia
webdunia
webdunia

31ರಂದು ಪಶು ವಿವಿ ಘಟಿಕೋತ್ಸವ: ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಉಪಸ್ಥಿತಿ

31ರಂದು ಪಶು ವಿವಿ ಘಟಿಕೋತ್ಸವ: ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಉಪಸ್ಥಿತಿ
ಬೀದರ್ , ಗುರುವಾರ, 30 ಆಗಸ್ಟ್ 2018 (14:44 IST)
ರಾಜ್ಯದ ಏಕೈಕ ಕರ್ನಾಟಕ ಪಶು ವೈದ್ಯಕೀಯ,ಪಶು ಹಾಗೂ ಮೀನುಗಾರಿಕೆ ವಿಜ್ಱನಿಗಳ ವಿಶ್ವವಿದ್ಯಾನಿಲಯದಲ್ಲಿ ಇದೇ ತಿಂಗಳ 31ರ   ಬೆಳಿಗ್ಗೆ 11ಗಂಟೆಗೆ ಘಟಿಕೋತ್ಸವ ನಡೆಯಲಿದೆ.

ಬೀದರ್ ನಗರದ ಹೊರವಲಯದ ನಂದಿ ನಗರದಲ್ಲಿರುವ ವಿವಿಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯಾ ನಾಯ್ಡು ಮುಖ್ಯ ಅತಿಥಿಗಳಾಗಿ,ರಾಜ್ಯಪಾಲ ವಾಜುಭಾಯಿ ರುಡಾಭಾಯಿ ವಾಲಾ, ಪಶು ಸಂಗೋಪನಾ ಸಚಿವ ವೆಂಕಟರಾವ ನಾಡಗೌಡ, ಸಚಿವ ಬಂಡೆಪ್ಪಾ ಕಾಶಂಪೂರ್ ಘಟಿಕೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಅಂದು ನಡೆಯುವ ಘಟಿಕೋತ್ಸವದಲ್ಲಿ 447 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಅದರಲ್ಲಿ 309 ಸ್ನಾತಕ ಪದವಿಧರರು,109 ಸ್ನಾತಕೋತ್ತರ ಪದವಿಧರರು, 29ಡಾಕ್ಟರೇಟ್ ಪದವಿಧರರು ಇರಲಿದ್ದಾರೆ. 34ಪದವಿಧರ ವಿದ್ಯಾರ್ಥಿಗಳು 66 ಚಿನ್ನದ ಪದಕಗಳನ್ನ ಕೊರಳಿಗೆ ಹಾಕಿಕೊಂಡು ಸಂಭ್ರಮಿಸಲಿದ್ದಾರೆ.

ಎಲ್ಲಕಿಂತ ಹೆಚ್ಚು ಹಾಸನದ ಪಶು ವೈದ್ಯಕೀಯ ವಿದ್ಯಾರ್ಥಿನಿ ಅಶ್ವಿನಿ ಬರೊಬ್ಬರಿ 11ಚಿನ್ನದ ಪದಕಗಳನ್ನ ಕೊರಳಿಗೆ ಹಾಕಿಕೊಂಡರೆ, ಬೀದರ್ ವೈದ್ಯಕೀಯ ಮಹಾವಿದ್ಯಾನಿಲಯದ ವಿದ್ಯಾರ್ಥಿ ರಾಮಕುಮಾರ 8 ಚಿನ್ನದ ಪದಕಗಳನ್ನ ಪಡೆಯಲಿದ್ದಾರೆ. ಅದಕ್ಕಾಗಿ ಅಂತಿಮ ಹಂತದ ಸಿದ್ದತೆ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಜೋರಾಗಿ ನಡೆದಿದೆ ಎಂದು ವಿಶ್ವ ವಿದ್ಯಾನಿಲಯ ಕುಲಪತಿ ನಾರಾಯಣ ಸ್ವಾಮಿ ಹೇಳಿದ್ದಾರೆ.






Share this Story:

Follow Webdunia kannada

ಮುಂದಿನ ಸುದ್ದಿ

ಇಂಡಿಯಾ ಈಸ್ ಗ್ರೇಟ್ ಎಂದ ಟಿಬೆಟ್ ಅಧ್ಯಕ್ಷ