Select Your Language

Notifications

webdunia
webdunia
webdunia
webdunia

ಅಸ್ಪ್ರಶ್ಯತೆ ಈಗಲೂ ಜೀವಂತ ಇರುವುದು ಎಲ್ಲಿ ಗೊತ್ತಾ?

ಅಸ್ಪ್ರಶ್ಯತೆ ಈಗಲೂ ಜೀವಂತ ಇರುವುದು ಎಲ್ಲಿ ಗೊತ್ತಾ?
ಗದಗ , ಶುಕ್ರವಾರ, 6 ಜುಲೈ 2018 (15:27 IST)
ಇಂದಿನ ಆಧುನಿಕ ಸಮಾಜದಲ್ಲಿಯೂ ಕೂಡ ಅಸ್ಪ್ರಶ್ಯತೆಯಂತ  ಕೆಲ ಪದ್ಧತಿಗಳು ಅಂದಿನಿಂದ ಇವತ್ತಿನವರೆಗೂ ಜಿವಂತ ಇವೆ. ಇವುಗಳನ್ನು ತೊಡೆದು ಹಾಕಲು ಕಾನೂನು ಮತ್ತು ಅದಕ್ಕೆ ಪೂರಕವಾಗಿ ಇಲಾಖೆಗಳು ಇದ್ದರೂ ಸಹಿತ ನಿಷ್ಪ್ರಯೋಜಕ. ಯಾಕೆಂದ್ರೆ ಅಂದಿನ ಆ ಅನಿಷ್ಠ ಪದ್ಧತಿಗಳು ಇಂದು ಕಡಿಮೆಯಾದರೂ ಸಹಿತ ಅದರ ಛಾಯೆ ಮಾತ್ರ ಮಾಸದೇ ಹಾಗೆ ಉಳಿದಿವೆ.

 
ಗದಗದ ಮುಂಡರಗಿ ತಾಲ್ಲೂಕಿನ ಸಿಂಗಾಟಲೂರ ಗ್ರಾಮದಲ್ಲಿ ಮೇಲ್ವರ್ಗದವರು ಕೆಳವರ್ಗದವರ ಮೇಲೆ ನಡೆಸಿರುವ ಅಸ್ಪೃಶ್ಯತೆ ಇದಕ್ಕೊಂದು ತಾಜಾ ಉದಾಹರಣೆ. ಸ್ವಾತಂತ್ರ್ಯ ದೊರೆತು 70 ವರ್ಷ ಸಮಿಪಿಸುತ್ತಿದ್ದರೂ  ಈ ಗ್ರಾಮದಲ್ಲಿ ಮನುಷ್ಯರ ಮನುಷ್ಯರನ್ನ ಹೀನಾಯವಾಗಿ ಕಾಣುವ ಹಾಗೂ ಮಾನವೀಯತೆಯನ್ನ  ಮರೆಮಾಚುವಂತ ಘಟನೆಗಳು ಇಂದಿಗೂ ಕೂಡ ಹೊಟಲ್ ಗಳಲ್ಲಿ ನಡೆಯುತ್ತಿವೆ. ಇಲ್ಲಿ ಮೇಲ್ವರ್ಗದ ಜನ ಎನಿಸಿಕೊಂಡವರು ಕೆಳ ವರ್ಗದವರಿಗೆ, ದಲಿತರಿಗೆ ಚಹದ ಅಂಗಡಿಯ ಒಳಗಡೆ ಪ್ರವೇಶಿಸದಂತೆ ಹೇಳಿ  ತಾವೆ ಕೈಯಾರೆ ನೀರು ಹಾಕಿ ಅವರನ್ನು ಕಡೆಗಣಿಸುತ್ತಿದ್ದಾರೆ. ಹೀಗಾಗಿ ತಮ್ಮ ಹಲವು ಮೂಡ ನಂಬಿಕೆಗಳ ಆಚರಣೆಗಳಿಂದ ದಲಿತರನ್ನ ಸಮಾಜದಿಂದ ದೂರ ಇಡುತ್ತಿದ್ದಾರೆ.

ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎನ್ನುವ ಜನರಿಗೆ ಮಾತ್ರ ಈ ತಾರತಮ್ಯ ಕಾಣುತ್ತಿಲ್ಲವೆನೋ? ಇಂಥ ಜಾತಿಭೇಧದ ವಿರುದ್ಧ ಯಾಕೆ ಮೌನವಾಗಿದ್ದಾರೆ ? ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಅಲ್ಲದೇ ಈಗಾಗಲೇ ಡಿಎಸ್ಎಸ್ ಸೇರಿದಂತೆ ಅನೇಕ ಪ್ರಗತಿಪರ ಚಿಂತಕರು, ಸಂಘಟನೆಗಳು ಈ ಗ್ರಾಮಗಳಲ್ಲಿ ನಡೆಯುತ್ತಿರುವ ಅಮಾನವೀಯ ಸಂಗತಿಗಳ ಕುರಿತು ಫೋಟೋ ಹಾಗೂ ಆಧಾರ ಸಹಿತ ಸಾಕಷ್ಟು ಬಾರಿ ಸಂಬಂದಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಹಶಿಲ್ದಾರರಿಗೆ ತಿಳಿಸಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗದೇ ಇರೋದು ಅನುಮಾನಕ್ಕೀಡು ಮಾಡಿದೆ ಅಂತಾ ಅಲ್ಲಿನ ನಾಗರಿಕರು ಆರೋಪಿಸಿದ್ದಾರೆ. ಅಲ್ಲದೇ ಅಧಿಕಾರಿಗಳ ಈ ನಡವಳಿಕೆಗೆ ಸ್ಥಳಿಯ ಚಿಂತಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ಬಸ್ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಯುವಕರು