Select Your Language

Notifications

webdunia
webdunia
webdunia
webdunia

ಉಕ್ಕಿನ ಮನುಷ್ಯನಿಗೆ ಏಕತೆಯ ನಮನ

ಉಕ್ಕಿನ ಮನುಷ್ಯನಿಗೆ ಏಕತೆಯ ನಮನ
ಯಾದಗಿರಿ , ಬುಧವಾರ, 31 ಅಕ್ಟೋಬರ್ 2018 (16:43 IST)
ದೇಶದ ಪ್ರಪ್ರಥಮ ಗೃಹ ಮಂತ್ರಿ, ಏಕತೆಯ ರೂವಾರಿ ಉಕ್ಕಿನ ಮನುಷ್ಯ ಸರದಾರ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆ ನಿಮಿತ್ಯ ಏಕತಾ ಓಟ ನಡೆಯಿತು.

ಯಾದಗಿರಿ  ಜಿಲ್ಲಾ ಬಿಜೆಪಿಯ ಕಚೇರಿ ಯಲ್ಲಿ ಏಕತಾ ಓಟ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಉದ್ಘಾಟನೆ ಮಾಡಿ ಮಾತನಾಡಿ, ಈ ದೇಶ ಭಾಷಾವಾರು ವಿಂಗಡಣೆಯಾದಾಗ ಏಕತೆಗಾಗಿ ಹೋರಾಟ ಮಾಡಿದ ಮಹಾನ್ ವ್ಯಕ್ತಿ ಪಟೇಲ್ ಅವರು. ಅದರಲ್ಲೂ ಹೈದ್ರಾಬಾದ್ ಕರ್ನಾಟಕ ಏಕೀಕರಣಕ್ಕೆ ಹಗಲಿರುಳು ಶ್ರಮಿಸಿದ್ದಾರೆ.

ನಮಗೆ ಒಂದು ವರ್ಷ ತಡವಾಗಿ ಸ್ವಾತಂತ್ರ್ಯ ಸಿಕ್ಕಿದೆ. ಈ ಭಾಗ ವಿಮೋಚನೆ ಆಗಲು ಉಕ್ಕಿನ ಮನುಷ್ಯನೇ ಕಾರಣ ಎಂದು ಸ್ಮರಿಸಿದರು. ಪ್ರಧಾನಿ ನರೇಂದ್ರ ಮೋದಿ ರವರು ಜಗತ್ತಿನಲ್ಲಿ ಅತಿ ಎತ್ತರದ ಪಟೇಲ್ ರ ಪುತ್ಥಳಿ ಅನಾವರಣ ಮಾಡಿದ್ದಾರೆ. ಅದು 597 ಅಡಿ ಎತ್ತರ ಇದೆ. ನಮ್ಮೆಲ್ಲರಿಗೆ ಸಂತೋಷ ದ ವಿಷಯವಾಗಿದೆ. ಅವರ ಆದರ್ಶಗಳನ್ನು ನಾವು ಪಾಲಿಸಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದರು.





Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಾರಿ, ಜಮಖಂಡಿ, ರಾಮನಗರ, ಮಂಡ್ಯದಲ್ಲಿ ಬಿಜೆಪಿ ಗೆಲುತ್ತದೆ: ಪ್ರತಾಪ ಸಿಂಹ