Select Your Language

Notifications

webdunia
webdunia
webdunia
webdunia

ಭವಾನಿ ರೇವಣ್ಣ ಇರುವಾಗಲೇ ಸಂತ್ರಸ್ತೆಯ ಹೇಳಿಕೆ ದಾಖಲಿಸಿದ ಎಸ್‌ಐಟಿ ತಂಡ

H D Revanna

Sampriya

ಬೆಂಗಳೂರು , ಶನಿವಾರ, 4 ಮೇ 2024 (17:40 IST)
Photo Courtesy X
ಬೆಂಗಳೂರು:  ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪದಡಿಯಲ್ಲಿ ಎಸ್‌ಐಟಿ ತಂಡ ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದೆ.

ಈ ಹಿನ್ನೆಲೆ ಇಂದು ಹೊಲನರಸೀಪುರದಲ್ಲಿರುವ ಎಚ್ ಡಿ  ರೇವಣ್ಣ ಅವರ ಮನೆಯಲ್ಲಿ ಎಸ್‌ಐಟಿ ತನಿಖಾ ತಂಡ ಸಂಸ್ರಸ್ತೆಯರನ್ನು ಕರೆತಂದು ಸ್ಥಳ ಮಹಜರು ನಡೆಸಿದರು. ರೇವಣ್ಣ ಅವರ ಮನೆಯ ಅಡುಗೆ ಕೋಣೆ, ಬೆಡ್‌ ರೂಂ ಸ್ಟೋರ್‌ ರೂಂನಲ್ಲಿ  ಮೂರು ಗಂಟೆಗಳ ಕಾಲ ಸ್ಥಳ ಮಹಜರು ನಡೆಸಿದರು.

ಈ ವೇಳೆ ಮನೆಯಲ್ಲಿ ಎಚ್ ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಹಾಗೂ ಜೆಡಿಎಸ್ ಮುಖಂಡರು ಇದ್ದರು. ಅದಲ್ಲದೆ ಸಂಸದ ಪ್ರಜ್ವಲ್ ರೇವಣ್ಣ ಅವರ ಮನೆಯಲ್ಲೂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿದ್ದು ಈ ಹಿನ್ನೆಲೆ ಅಲ್ಲಿಯೂ ಬಿಗಿ ಭದ್ರತೆಯಲ್ಲಿ ಎಸ್‌ಐಟಿ ತಂಡ ಸ್ಥಳ ಮಹಜರು ನಡೆಸಿದರು.

ಮಹಜರು ಪ್ರಕ್ರಿಯೆ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ಪಂಚನಾಮೆ ಬಳಿಕ ಸ್ಥಳದಲ್ಲಿಯೇ ಸಂತ್ರಸ್ತೆಯ ಹೇಳಿಕೆ ದಾಖಲು ಮಾಡಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಪೆನ್‌ಡ್ರೈವ್ ಪ್ರಕರಣ ಮುಂದಿಟ್ಟು ಕಾಂಗ್ರೆಸ್ ಚುನಾವಣೆ ಗೆಲ್ಲುವ ವಿಶ್ವಾಸದಲ್ಲಿದೆ: ಬಿ.ವೈ.ವಿಜಯೇಂದ್ರ ವ್ಯಂಗ್ಯ