Select Your Language

Notifications

webdunia
webdunia
webdunia
webdunia

ಜಗತ್ತಿನ ಅಪರೂಪದ ಮಗು ರಾಜ್ಯದಲ್ಲಿ ಜನನ

ಜಗತ್ತಿನ ಅಪರೂಪದ ಮಗು ರಾಜ್ಯದಲ್ಲಿ ಜನನ
ಗದಗ , ಮಂಗಳವಾರ, 14 ಆಗಸ್ಟ್ 2018 (14:16 IST)
ಪ್ರಪಂಚದಲ್ಲಿಯೇ ಅಪರೂಪದಲ್ಲಿ ಅಪರೂಪ ಎನಿಸಿದ ಮಗುವೊಂದು ರಾಜ್ಯದಲ್ಲಿ ಜನಿಸಿದೆ.
ಗದಗ ಜಿಲ್ಲೆ ರೋಣ ತಾಲೂಕಿನ ಬೆಳವಣಿಕಿ ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ಅಪರೂಪದ ಮಗು ಜನಿಸಿದೆ.

ವೈಜ್ಞಾನಿಕವಾಗಿ ಈ ಮಗುವನ್ನು ಸಿರೆನೊಮೆಲಿಯಾ, ಮತ್ಸ್ಯ ರೂಪದ ಶಿಶು ಎಂದು ಹೇಳಲಾಗುತ್ತದೆ. ಬೆಳವಣಕಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನಿಸಿದೆ. ಎರಡು ಕಾಲು ಜೊತೆಗೂಡಿ ಒಂದೇ ಆಕಾರದಲ್ಲಿ ಜನಿಸಿರುವ ಈ ಮಗು ಪ್ರಪಂಚದಲ್ಲಿ ತೀರಾ ವಿರಳವಾಗಿರುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ರೀತಿಯ ಅಪರೂಪದ ಮಗು ಹುಟ್ಟಿದ್ದನ್ನು ಕಂಡು ವೈದ್ಯರು, ಸಿಬ್ಬಂದಿ, ಪಾಲಕರು ಕೂಡ ದಿಗ್ಭ್ರಮೆಗೊಂಡಿದ್ದಾರೆ. ಇಲ್ಲಿ ಜನಿಸಿದ ಮಗು ಜನಿಸಿದ ಮೂರು ಗಂಟೆಯೊಳಗೆ ಸಾವನ್ನಪ್ಪಿದ್ದು, ಮಗುವಿನ ಅಂತ್ಯಸಂಸ್ಕಾರವನ್ನು ಪಾಲಕರು ರಾತ್ರಿಯೇ ನೆರವೇರಿಸಿದ್ದಾರೆ ಎನ್ನಲಾಗುತ್ತಿದೆ. ಈ ಆಕೃತಿಯ ಶಿಶುಗಳು ಬದುಕುವುದು ತುಂಬಾ ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಕುಕ್ಕೆ ಸುಬ್ರಹ್ಮಣ್ಯ ದೇವರ ಮೊರೆ ಹೋದ ಹೆಚ್.ಡಿ.ಕೆ