Select Your Language

Notifications

webdunia
webdunia
webdunia
webdunia

ಅದ್ಧೂರಿಯಾಗಿ ನಡೆದ ಶರಣ ಸಂಸ್ಕೃತಿ ಕಾರ್ಯಕ್ರಮ

ಅದ್ಧೂರಿಯಾಗಿ ನಡೆದ ಶರಣ ಸಂಸ್ಕೃತಿ ಕಾರ್ಯಕ್ರಮ
ಚಿಕ್ಕೋಡಿ , ಸೋಮವಾರ, 21 ಜನವರಿ 2019 (18:18 IST)
ಗಡಿ ಜಿಲ್ಲೆಯಲ್ಲಿ ಆಯೋಜಿಸಿದ್ದ ಶರಣ ಸಂಸ್ಕೃತಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ಮತ್ತು ಮೋಟಗಿಮಠ ಅಥಣಿ ಸಹಯೋಗದಲ್ಲಿ ವಚನ ವರ್ತಮಾನ ಎಂಬ ವಿಷಯದ ಕುರಿತು ಒಂದು ದಿನದ ರಾಜ್ಯ ಮಟ್ಟದ ಚಿಂತನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ದಿವ್ಯ ಸಾನಿದ್ಯವನ್ನು  ಇಳಕಲ್ ವಿಜಯಮಹಂತೇಶ ಸಂಸ್ಥಾನಮಠದ ಗುರುಮಹಾಂತ ಮಹಾಸ್ವಾಮಿಗಳು ವಹಿಸಿದ್ದರು.

ಈ ವೇಳೆ ಕಾರ್ಯಕ್ರಮ ದಲ್ಲಿ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಹಮತ ತರೀಕೆರೆ, ಸೂಫಿ ಶರಣರ ಸಾಮರಸ್ಯದ ಕಾಳಜಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಹಂಪಿ ವಿಶ್ವ ವಿದ್ಯಾಲಯದ ಕುಲಪತಿ ಡಾ.   ಮಲ್ಲಿಕಾ ಘಂಟಿ, ತುಮಕೂರಿನ ಸಿದ್ದಗಂಗಾ ಶ್ರೀಗಳ ಸಾಮಾಜಿಕ ಧಾರ್ಮಿಕ ಸೇವೆ ಅನನ್ಯವಾಗಿದ್ದು, ಭಾರತ ಸರ್ಕಾರ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ತನ್ನ ಘನತೆ ಹೆಚ್ಚಿಸಿಕೊಳ್ಳಬೇಕು. ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಿದರೆ ಅಕ್ಷರಲೋಕವನ್ನು ಗೌರವಿಸಿದಂತಾಗುತ್ತದೆ ಎಂದರು.



 


Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದಗಂಗಾ ಶ್ರೀ ಬಗ್ಗೆ ಸಂಸದ ಹೇಳಿದ್ದೇನು?