Select Your Language

Notifications

webdunia
webdunia
webdunia
webdunia

ಮಗುವಿನ ಎದುರೇ ತಾಯಿಯನ್ನು ಕೊಲೆ ಮಾಡಿದ ದುಷ್ಕರ್ಮಿಗಳು

ಮಗುವಿನ ಎದುರೇ ತಾಯಿಯನ್ನು ಕೊಲೆ ಮಾಡಿದ ದುಷ್ಕರ್ಮಿಗಳು
ವಿಜಯಪುರ , ಸೋಮವಾರ, 10 ಡಿಸೆಂಬರ್ 2018 (14:53 IST)
ವಿಜಯಪುರ : ಮನೆಗೆ ನುಗ್ಗಿದ ದುಷ್ಕರ್ಮಿಗಳು  ಮಗುವಿನ ಎದುರೇ ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ತಾಳಿಕೋಟಿ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.


ಶಂಕ್ರವ್ವ ಪ್ರಭಪ್ಪ ಹರಿಜನ(30) ಕೊಲೆಯಾದ ಮಹಿಳೆ. ಕೊಲೆಯಾದ ಮಹಿಳೆಯ ಪತಿ ಬೇರೆ ಊರಿಗೆ ಹೋಗಿದ್ದು, ಮಗು ಹಾಗೂ ಮಹಿಳೆ ಇಬ್ಬರೇ ಇದ್ದ ವೇಳೆ ದುಷ್ಕರ್ಮಿಗಳು ಏಕಾಏಕಿ ಮನೆಗೆ ನುಗ್ಗಿದ್ದಾರೆ. ಬಳಿಕ ಮಗುವಿನ ಎದುರಲ್ಲೇ ತಾಯಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.


ಬೆಳಗ್ಗೆ ಅಕ್ಕಪಕ್ಕದ ಮನೆಯವರು ಶಂಕ್ರವ್ವನ ಮನೆಗೆ ಬಂದಾಗ ಮಹಿಳೆ ಕೊಲೆಯಾಗಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ತಾಳಿಕೋಟೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಮೃತದೇಹ ಬಟ್ಟೆ ಇಲ್ಲದೆ ನಗ್ನವಾಗಿ ಬಿದ್ದಿರುವ ಸ್ಥಿತಿಯನ್ನು ಕಂಡು ದುಷ್ಕರ್ಮಿಗಳು ಅತ್ಯಾಚಾರವೆಸೆಗಿ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಗಳಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಧರ್ಮದ ಪಟ್ಟ ಕಟ್ಟಿದ ಡಿಕೆಶಿಗೆ ಆರ್. ಅಶೋಕ್ ಟಾಂಗ್