Select Your Language

Notifications

webdunia
webdunia
webdunia
webdunia

ಸ್ಥಳೀಯ ಸಂಸ್ಥೆ: ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುತ್ತೇವೆ ಎಂದ ಮಾಜಿ ಪ್ರಧಾನಿ

ಸ್ಥಳೀಯ ಸಂಸ್ಥೆ: ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುತ್ತೇವೆ ಎಂದ ಮಾಜಿ ಪ್ರಧಾನಿ
ಹಾಸನ , ಮಂಗಳವಾರ, 4 ಸೆಪ್ಟಂಬರ್ 2018 (14:07 IST)
ಅತಂತ್ರವಾಗಿರುವ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದರ ಮೂಲಕ ಬಿಜೆಪಿಯನ್ನು ಹೊರಗಿಡುವ ಪ್ರಯತ್ನ ಮಾಡುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.

ಹಾಸನದಲ್ಲಿ ಮಾತನಾಡಿದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ನಮ್ಮ ಪಕ್ಷ ಹಾಸನದಲ್ಲಿ ಮೆಜಾರಿಟಿ ಇದೆ. ಮೈಸೂರು ಮತ್ತು ತುಮಕೂರಿನಲ್ಲಿ ಇಬ್ಬರು ಸೇರಿ ಬಿಜೆಪಿಯನ್ನು ಹೊರಗಿಡಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಯಾರೊಂದಿಗೂ ನಾನು ಮಾತುಕತೆ ನಡೆಸಿಲ್ಲ. ಸದ್ಯ ಸಿದ್ದರಾಮಯ್ಯನವರು ವಿದೇಶಕ್ಕೆ ಹೋಗಿದ್ದಾರೆ. ಮೈಸೂರಲ್ಲಿ  ಬಿಜೆಪಿಯವರನ್ನ ಹೊರಗಿಡಲು ನಾವು ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಮಾಡುತ್ತೇವೆ. ರಾಜ್ಯದ ಎಲ್ಲಾ ಕಡೆ ಇದೇ ರೀತಿ ಮಾಡಿಕೊಳ್ಳುತ್ತೇವೆ ಎಂದರು.

ನಗರ ಪ್ರದೇಶದಲ್ಲಿ ಒಂದೇ ರೀತಿಯ ಸಮಾಜ ಇರೋದಿಲ್ಲ. ಎಲ್ಲಾ ರೀತಿಯ ಜನಾಂಗಗಳು ಇರುತ್ತವೆ. ಲೋಕಸಭಾ ಚುನಾವಣೆ ಬೇರೆ, ಸ್ಥಳೀಯ ಸಂಸ್ಥೆ ಚುನಾವಣೆ ಬೇರೆ. ಅದಕ್ಕೂ ಇದಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಸದ್ಯ ರಾಹುಲ್ ಗಾಂಧಿಯವರು ಕೈಲಾಸ ಯಾತ್ರೆಯಲ್ಲಿ ದ್ದಾರೆ. ಅವರು ಬಂದ ನಂತರ ಇದರ ಬಗ್ಗೆ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ.

ಸಂಪುಟ ವಿಸ್ತರಣೆ ಸಾಧ್ಯತೆ ಇದೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ಗೌಡರು, ಇದೆಲ್ಲಾ ಸರ್ಕಾರ ದಲ್ಲಿರುವ ಪಾಲುದಾರರಿಗೆ ಸೇರಿದ್ದು. ಹೆಚ್ಚಿನ ಪಾಲುದಾರಿಕೆ ನಮಗಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಈ ಕುರಿತು ಈಗಾಗಲೇ ಹೇಳಿದ್ದಾರೆ ಎಂದರು.




Share this Story:

Follow Webdunia kannada

ಮುಂದಿನ ಸುದ್ದಿ

ಟ್ವಿಟ್ಟರ್‌ನಲ್ಲಿ ಬಿಎಸ್ ವೈ- ಪ್ರಿಯಾಂಕ್ ಖರ್ಗೆ 'ಸ್ಟಂಟ್' ಫೈಟ್