Select Your Language

Notifications

webdunia
webdunia
webdunia
webdunia

ದೇಶದ ಅತಿ ಉದ್ದದ ರೈಲ್ವೆ ಸೇತುವೆ ಉದ್ಘಾಟನೆಗೆ ಸಜ್ಜು

ದೇಶದ ಅತಿ ಉದ್ದದ ರೈಲ್ವೆ ಸೇತುವೆ ಉದ್ಘಾಟನೆಗೆ ಸಜ್ಜು
ನವದೆಹಲಿ , ಗುರುವಾರ, 6 ಡಿಸೆಂಬರ್ 2018 (13:59 IST)
ದೇಶದ ಅತ್ಯಂತ ಉದ್ದನೆಯ ರೈಲ್ವೆ ಸೇತುವೆ ಉದ್ಘಾಟನೆ ಸಜ್ಜುಗೊಂಡಿದೆ.

ದೇಶದಲ್ಲಿಯೇ ಅತ್ಯಂತ ಉದ್ದವಾಗಿರುವ ರೈಲ್ವೆ ಸೇತುವೆ ಬೋಗಿಬೀಲ್ ರೈಲ್ವೆ ಸೇತುವೆಯನ್ನು ಡಿ.25ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಭಾಗವಾಗಿರುವ ರೈಲು ಮಾರ್ಗ ಬ್ರಹ್ಮಪುತ್ರ ನದಿ ದಂಡೆಯ ಉತ್ತರ ಮತ್ತು ದಕ್ಷಿಣ ಭಾಗಕ್ಕೆ ಸಂಪರ್ಕ ಕಲ್ಪಿಸಲಿದೆ.
ಸೇತುವೆ 4.94 ಕಿ.ಮೀ ಉದ್ದವಿದೆ. ಅಂದು ಕೇಂದ್ರ ಸರ್ಕಾರದ ಉತ್ತಮ ಆಡಳಿತ ನೀಡಿದ ದಿನವನ್ನಾಗಿಯೂ ಆಚರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1997ರಲ್ಲಿ ಪ್ರಧಾನಿಯಾಗಿದ್ದ ಎಚ್.ಡಿ.ದೇವೇಗೌಡರು ರೈಲು ಮಾರ್ಗಕ್ಕೆ ಶಿಲಾನ್ಯಾಸ ನೆರವೇಸಿದ್ದರು. 2002 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಸೇತುವೆಯ ಕಾಮಗಾರಿ ಆರಂಭಿಸಲಾಗಿತ್ತು. 16 ವರ್ಷಗಳ ಅವಧಿಯಲ್ಲಿ ಕಾಮಗಾರಿ ಪೂರೈಸಲು ಸಾಕಷ್ಟು ಗಡುವು ನೀಡಿದ್ದರೂ ಕಾಮಗಾರಿ ಪೂರ್ಣಗೊಂಡಿರಲಿಲ್ಲ.
ಈಗ ಸೇತುವೆ ಉದ್ಘಾಟನೆಗೆ ದಿನಾಂಕ ನಿಗದಿಯಾಗಿರುವುದರಿಂದ ಭಾಗದ ಬಹುದಿಗಳ ಕನಸು ನನಸಾದಂತಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ನೀರಾವರಿ ಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದ ಬಿಜೆಪಿ, ಕಾಂಗ್ರೆಸ್ ಶಾಸಕರು