Select Your Language

Notifications

webdunia
webdunia
webdunia
webdunia

ಮೊಬೈಲ್ ನಲ್ಲಿ ಚಿತ್ರಿಕರಣ ಮಾಡುತ್ತಿದ್ದವನ ಅಟ್ಟಿಸಿಕೊಂಡ ಬಂದ ಕಾಡಾನೆಗಳು!

ಮೊಬೈಲ್ ನಲ್ಲಿ ಚಿತ್ರಿಕರಣ ಮಾಡುತ್ತಿದ್ದವನ ಅಟ್ಟಿಸಿಕೊಂಡ ಬಂದ ಕಾಡಾನೆಗಳು!
ಹಾಸನ , ಸೋಮವಾರ, 3 ಡಿಸೆಂಬರ್ 2018 (15:36 IST)
ಅಲ್ಲಿ ಬೆಳ್ಳಂಬೆಳಿಗ್ಗೆ 20 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಾಣಿಸಿಕೊಂಡಿತ್ತು. ಕಾಡಾನೆಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿಯಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಕಾಡಾನೆಗಳು ಬಿಡದೇ ಬೆನ್ನಟ್ಟಿ ಬಂದವು. ಆ ಮೇಲೆ ಏನಾಯ್ತು ಗೊತ್ತಾ?

ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿಗೆ ಕಡಿವಾಣ ಬೀಳುತ್ತಿಲ್ಲ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ರಾಜೇಂದ್ರಪುರ ಗ್ರಾಮದ ಹೊಂಡದಲ್ಲಿ ಕೆಲವು ಹೊತ್ತು ಕಾಡಾನೆಗಳು ಆಟ ಆಡಿವೆ. ಆ ಗುಂಪಿನಲ್ಲಿ 5 ಕ್ಕೂ ಹೆಚ್ಚು ಮರಿ ಆನೆಗಳು ಇದ್ದವು. ಆನೆ ಹಿಂಡು ಕಂಡು ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರು
ಕಾಡಾನೆಗಳನ್ನು ಕಂಡು ಹೈರಾಣಾಗುತ್ತಿದ್ದಾರೆ.

ಕಾಡಾನೆಗಳ ಚಿತ್ರವನ್ನು ಮೊಬೈಲ್ ನಲ್ಲಿ‌ ಸೆರೆಹಿಡಿಯುತ್ತಿದ್ದವನನ್ನು ಆನೆಗಳು ಓಡಿಸಿಕೊಂಡು ಬಂದಿವೆ. ಆ ವ್ಯಕ್ತಿ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾನೆ.

ಆನೆ ಹಾವಳಿಗೆ ಪರಿಹಾರ ಕಂಡು ಹಿಡಿಯುವಂತೆ ಒಕ್ಕೊರಲ ಒತ್ತಾಯ ಕೇಳಿಬರುತ್ತಿದೆ. ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರ ನಿರ್ಮಾಣಕ್ಕಾಗಿ ಜಾಗೃತ ಸಮಾವೇಶ: ಪೊಲೀಸರೊಂದಿಗೆ ವಾಗ್ವಾದ