Select Your Language

Notifications

webdunia
webdunia
webdunia
webdunia

ದಾವಣಗೆರೆಯಲ್ಲಿ ತಂಪೆರೆದ ವರುಣ: ಇನ್ನೂ 7 ದಿನ ಮಳೆ ಸಾಧ್ಯತೆ

Rain

Sampriya

ಬೆಂಗಳೂರು , ಶುಕ್ರವಾರ, 12 ಏಪ್ರಿಲ್ 2024 (20:04 IST)
ಬೆಂಗಳೂರು: ಬಿಸಿಲ  ಧಗೆಯಿಂದ ಕಂಗೆಟ್ಟಿರುವ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಆಗಮನವಾಗಿದೆ. ಹವಾಮಾನ ಇಲಾಖೆ ಪ್ರಕಾರ ಇನ್ನೂ 7 ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ನೀಡಿದೆ.

ಬೆಣ್ಣೆ ನಗರಿ ದಾವಣಗೆರೆಯಲ್ಲಿ ಸತತ ಅರ್ಧಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ಇದರಿಂದ ಬಿಸಿಲ ಧಗೆಗೆ ಬೆಂದು ಹೋಗಿದ್ದ ಮಂದಿಗೆ ವರುಣ ತಂಪೆರೆದಿದ್ದಾನೆ.

ಇನ್ನೂ ಬೆಳಗಾವಿಯಲ್ಲಿ ಒಂದು ಗಂಟೆಗೂ ಹೆಚ್ಚು ಸುರಿದ ಗುಡುಗು ಸಹಿತ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.  ಇನ್ನು ವಿಜಯಪುರ ಜಿಲ್ಲೆಯಾದ್ಯಂತ ಮಳೆಯಾಗಿದೆ.

7 ದಿನಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇನ್ನೂ ಕರಾವಳಿ ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲು ವಿಪರೀತವಾಗುತ್ತಿದ್ದು, ಕರಾವಳಿ ಮಂದಿ ವರುಣನ ಆಗಮನಕ್ಕೆ ಕಾಯುತ್ತಿದ್ದಾರೆ.

ಇನ್ನೂ ಮೂರು ದಿನ ಕರಾವಳಿಯಲ್ಲೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಾಮಪತ್ರ ಸಲ್ಲಿಸಲ್ಲ ಎಂದವರಿಗೆ ಮೆರವಣಿಗೆ ಮೂಲಕ ಉತ್ತರಿಸಿದ್ದೇನೆ: ಕೆ ಎಸ್‌ ಈಶ್ವರಪ್ಪ