Select Your Language

Notifications

webdunia
webdunia
webdunia
webdunia

ನಕಲಿ ಫಲಾನುಭವಿಗಳಿಗೆ ಮಾಸಾಶನ ಮಂಜೂರು: ಉಪತಹಶೀಲ್ದಾರ ಅಮಾನತ್

ನಕಲಿ ಫಲಾನುಭವಿಗಳಿಗೆ ಮಾಸಾಶನ ಮಂಜೂರು: ಉಪತಹಶೀಲ್ದಾರ ಅಮಾನತ್
ಕಲಬುರಗಿ , ಮಂಗಳವಾರ, 4 ಡಿಸೆಂಬರ್ 2018 (20:20 IST)
ನಕಲಿ ಫಲಾನುಭವಿಗಳಿಗೆ ಮಾಸಾಶನ ಮಂಜೂರು ಸೇರಿದಂತೆ ಇತರ ಕಾನೂನು ಬಾಹಿರ ಕೆಲಸಗಳ ಕಾರಣದಿಂದ ಉಪ ತಹಸೀಲ್ದಾರ್ ರನ್ನು ಅಮಾನತ್ ಮಾಡಲಾಗಿದೆ.

 ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬಸಾಪ್ಟಟಣ ಗ್ರಾಮದ ನಕಲಿ ಫಲಾನುಭವಿಗಳಿಗೆ ಮಾಸಾಶನ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಗಂಗಾವತಿ ತಾಲೂಕಿನ ಮರಳಿ ನಾಡ ಕಚೇರಿಯ ಉಪ ತಹಶೀಲ್ದಾರ ಮಂಜುನಾಥ ಎಸ್. ನಂದನ ಅವರನ್ನು ಕರ್ನಾಟಕ ನಾಗರೀಕ ಸೇವಾ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(21)ರ ಪ್ರಕಾರ ಅಮಾನತ್ತುಗೊಳಿಸಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಮಂಜುನಾಥ ಎಸ್. ನಂದನ ಅವರು ಈ ಹಿಂದೇ ಗಂಗಾವತಿ ತಾಲೂಕಿನ  ವೆಂಕಟಗಿರಿ ನಾಡ ಕಚೇರಿಯ ಪ್ರಭಾರಿ ಉಪ ತಹಶೀಲ್ದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ವೆಂಕಗಿರಿ ನಾಡ ಕಚೇರಿ ವ್ಯಾಪ್ತಿಯ ಬಸಾಪಟ್ಟಣ ಗ್ರಾಮದಲ್ಲಿ ಅನರ್ಹ ಫಲಾನುಭವಿಗಳಿಗೆ ಮಾಶಾಸನ ಮಂಜೂರು ಮಾಡಿದ್ದಾರೆ ಎಂದು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಈ ಕುರಿತು ಕೊಪ್ಪಳ ಜಿಲ್ಲಾಧಿಕಾರಿಯವರು ಪ್ರೊಬೇಷನರ್ ಐ.ಎ.ಎಸ್ ಅಕ್ಷೇಯ ಶ್ರೀಧರ ಹಾಗೂ ಚುನಾವಣೆ ತಹಶೀಲ್ದಾರ ಹೆಚ್.ವಿಶ್ವನಾಥ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ವರದಿ ನೀಡಲು ಸೂಚಿಸಿದರು.

ತನಿಖಾ ತಂಡವು ವೆಂಕಟಗಿರಿ ನಾಡ ಕಚೇರಿಗೆ ಹಾಗೂ ಬಸಾಪಟ್ಟಣ ಗ್ರಾಮದ ಮನೆ-ಮನೆಗೆ ಭೇಟಿ ನೀಡಿ ಸೂಕ್ತ ತನಿಖೆ ಕೈಗೊಂಡು ಬಸಾಪಟ್ಟಣ ಗ್ರಾಮದಲ್ಲಿ 193 ವಿಕಲಚೇತನನ್ನು ಹಾಗೂ ಸಂಧ್ಯಾ ಸುರಕ್ಷಾ ಯೋಜನೆಯಡಿ 44 ಜನರ ಅನರ್ಹ ಫಲಾನುಭವಿಗಳನ್ನು ಪತ್ತೆ ಮಾಡಿದ್ದಾರೆ. ಇದಲ್ಲದೆ ಮಾಶಾಸನ ಮಂಜೂರಾದವರ ಪೈಕಿ 48 ಜನ ಫಲಾನುಭವಿಗಳು ಬಸಾಪಟ್ಟಣ ನಿವಾಸಿಗಳಿರಿವುದಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದರು.  
ಅದರಂತೆ ಪ್ರಾದೇಶಿಕ ಆಯುಕ್ತರು ಸದರಿಯವರನ್ನು ಅಮಾನತ್ತುಗೊಳಿಸಿ ಡಿಸೆಂಬರ್ 4 ರಂದು ಆದೇಶ ಹೊರಡಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊಲೆ ಆರೋಪಿಗೆ ಗುಂಡೇಟು