Select Your Language

Notifications

webdunia
webdunia
webdunia
webdunia

ಏಕತಾ ಪ್ರತಿಮೆ ಆಯ್ತು, ಇದೀಗ ಕೆಆರ್ ಎಸ್ ನಲ್ಲಿ ತಲೆಯೆತ್ತಲಿದೆ ಕಾವೇರಿ ಪ್ರತಿಮೆ

ಏಕತಾ ಪ್ರತಿಮೆ ಆಯ್ತು, ಇದೀಗ ಕೆಆರ್ ಎಸ್ ನಲ್ಲಿ ತಲೆಯೆತ್ತಲಿದೆ ಕಾವೇರಿ ಪ್ರತಿಮೆ
ಬೆಂಗಳೂರು , ಶುಕ್ರವಾರ, 16 ನವೆಂಬರ್ 2018 (08:37 IST)
ಬೆಂಗಳೂರು: ಗುಜರಾತ್ ನ ನರ್ಮದಾ ತೀರದಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಭಾರತದ ಉಕ್ಕಿನ ಮನುಷ್ಯ ಎಂದೇ ಜನಜನಿತರಾಗಿರುವ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಏಕತಾ ಪ್ರತಿಮೆ ಲೋಕಾರ್ಪಣೆಗೊಳಿಸಿದ್ದರು.

ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎನ್ನುವ ಗರಿಮೆಗೆ ಇದು ಪಾತ್ರವಾಗಿತ್ತು. ಅದರ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ಅಂತಹದ್ದೇ ಒಂದು ಯೋಜನೆಗೆ ರಾಜ್ಯದ ಸಮ್ಮಿಶ್ರ ಸರ್ಕಾರ ಮುಂದಾಗಿದೆ.

ಕೆಆರ್ ಎಸ್ ಬಳಿ 125 ಅಡಿ ಎತ್ತರದ ಕಾವೇರಿ ಪ್ರತಿಮೆ ನಿರ್ಮಿಸಲು ಸರ್ಕಾರ ಮುಂದಾಗಿದೆ. ಇದರ ಯೋಜನಾ ವೆಚ್ಚ ಸುಮಾರು 1200 ಕೋಟಿ ರೂ. ಆಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಪ್ರತಿಮೆ ಜತೆಗೆ ಪ್ರವಾಸೋದ್ಯಮಕ್ಕೆ ಬೇಕಾದ ಎಲ್ಲಾ ಆಕರ್ಷಣೀಯ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಯೋಜನೆ ರೂಪಿಸಿದೆ.

ಆದರೆ ಇದರ ಯೋಜನಾ ವೆಚ್ಚವನ್ನು ಸರ್ಕಾರದ ಬೊಕ್ಕಸದಿಂದ ಬಳಸದೇ ಖಾಸಗಿ ಹೂಡಿಕೆದಾರರಿಗೆ ಬಿಟ್ಟುಬಿಡಲು ಸರ್ಕಾರ ಚಿಂತನೆ ನಡೆಸಿದೆ. ಸಿಎಂ ಕುಮಾರಸ್ವಾಮಿ ಮತ್ತು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಂತಹದ್ದೊಂದು ತೀರ್ಮಾನ ಕೈಗೊಳ್ಳಲಾಗಿದೆ. ಇದೀಗ ಹೂಡಿಕೆದಾರರು ಮುಂದೆ ಬಂದಲ್ಲಿ ಪ್ರತಿಮೆ ಕೆಲಸವೂ ಶುರುವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸಿದ ರೈತರು!