Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನ ಯಾವ ಸಚಿವರಿಗೆ ಯಾವ ಖಾತೆ ಎಂಬ ಅಧಿಕೃತ ಪಟ್ಟಿ ಇಲ್ಲಿದೆ ನೋಡಿ

ಕಾಂಗ್ರೆಸ್ ನ  ಯಾವ ಸಚಿವರಿಗೆ ಯಾವ ಖಾತೆ ಎಂಬ ಅಧಿಕೃತ ಪಟ್ಟಿ ಇಲ್ಲಿದೆ ನೋಡಿ
ಬೆಂಗಳೂರು , ಶುಕ್ರವಾರ, 28 ಡಿಸೆಂಬರ್ 2018 (12:04 IST)
ಬೆಂಗಳೂರು : ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಇತ್ತೀಚೆಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾಂಗ್ರೆಸ್ ನ 8 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಅದಕ್ಕೆ ಸಂಬಂಧಪಟ್ಟ ಅಧಿಕೃತ ಪಟ್ಟಿ ಹಿಗೆದೆ ನೋಡಿ


ಡಿಸಿಎಂ ಡಾ, ಜಿ ಪರಮೇಶ್ವರ್ ಅವರಿಗೆ ಗೃಹ ಖಾತೆ ಬದಲು 2 ಹೊಸ ಖಾತೆಯನ್ನು ನೀಡಲಾಗಿದೆ. ಆ ಮೂಲಕ ಇದೀಗ  ಡಾ, ಜಿ ಪರಮೇಶ್ವರ್ ಅವರಿಗೆ ಬೆಂಗಳೂರು ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ಖಾತೆಗಳಂತೆ  ಒಟ್ಟು 3 ಖಾತೆಗಳನ್ನು ನೀಡಲಾಗಿದೆ.


ಡಿ.ಕೆ.ಶಿವಕುಮಾರ್ ಅವರಿಗೆ ವೈದ್ಯಕೀಯ ಶಿಕ್ಷಣ ಬದಲು ಕನ್ನಡ ಸಂಸ್ಖೃತಿ ಮತ್ತು ವಾರ್ತಾ ಇಲಾಖೆ ನೀಡಲಾಗಿದೆ.  ಅವರಿಗೆ ಒಟ್ಟು ಮೂರು ಖಾತೆಗಳನ್ನು ನೀಡಿದ್ದು,  ಇದೀಗ ಅವರು ಜಲಸಂಪನ್ಮೂಲ, ಕನ್ನಡ ಸಂಸ್ಖೃತಿ ಮತ್ತು ವಾರ್ತಾ ಸಚಿವರಾಗಿದ್ದಾರೆ.
ಆರ್. ವಿ. ದೇಶಪಾಂಡೆಗೆ ಕಂದಾಯ ಇಲಾಖೆ ನೀಡುವುದರ ಮೂಲಕ  ಕೇವಲ ಒಂದು ಖಾತೆ ಸಿಕ್ಕಿದೆ.


ಕೆ.ಜೆ.ಜಾರ್ಜ್ ಗೆ ಕೈಗಾರಿಕಾ ಇಲಾಖೆ, ಕೃಷ್ಣ ಬೈರೇಗೌಡ ಅವರಿಗೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ, ಯು.ಟಿ ಖಾದರ್ ಗೆ  ನಗರಾಭಿವೃದ್ಧಿ, ಮೂಲ ಸೌಕರ್ಯ ಖಾತೆ, ಆರ್.ಬಿ ತಿಮ್ಮಾಪೂರ್ ಗೆ ಸಕ್ಕರೆ ಮತ್ತು ಒಳಸಾರಿಗೆ ಇಲಾಖೆ, ರಹೀಂ ಖಾನ್ ಗೆ ಯುವಜನ ಸೇವೆ ಹಾಗೂ ಕ್ರೀಡೆ ಇಲಾಖೆ, ಪಿ.ಟಿ ಪರಮೇಶ್ವರ್ ನಾಯ್ಕ್ ಗೆ ಐಟಿ-ಬಿಟಿ ಹಾಗೂ ಮುಜರಾಯಿ ಇಲಾಖೆ, ಇ.ತುಕಾರಾಂ ಗೆ ವೈದ್ಯಕೀಯ ಶಿಕ್ಷಣ ಇಲಾಖೆ, ಎಂಟಿಬಿ ನಾಗರಾಜ್ ಗೆ  ವಸತಿ ಇಲಾಖೆ, ಸಿ.ಎಸ್ ಶಿವಳ್ಳಿಗೆ ಪೌರಾಡಳಿತ ಇಲಾಖೆ, ಸತೀಶ್ ಜಾರಕಿಹೊಳಿ ಗೆ ಅರಣ್ಯ ಮತ್ತು ಪರಿಸರ ಇಲಾಖೆ, ಎಂ.ಬಿ ಪಾಟೀಲ್ ಗೆ  ಗೃಹ ಇಲಾಖೆ ನೀಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಎಚ್ ವಿಶ್ವನಾಥ್. ಕಾರಣವೇನು ಗೊತ್ತಾ?