Select Your Language

Notifications

webdunia
webdunia
webdunia
webdunia

ಭದ್ರತಾ ಲೋಪ: ಮೋದಿಗೆ ಚೊಂಬು ಪ್ರದರ್ಶಿಸಿದ ನಲಾಪಾಡ್ ಪೊಲೀಸ್ ವಶಕ್ಕೆ

Nalpad

Sampriya

ಬೆಂಗಳೂರು , ಶನಿವಾರ, 20 ಏಪ್ರಿಲ್ 2024 (20:19 IST)
Photo Courtesy X
ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆ ಇಂದು ಕರ್ನಾಟಕಕ್ಕೆ ಪ್ರಚಾರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಯುವ ನಾಯಕ ನಲಾಪಡ್ ಚೊಂಬು ಪ್ರದರ್ಶಿಸಿದ್ದು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೋದಿ ಅವರು ಬೆಂಗಳೂರಿನ ಮೇಖ್ರಿ ಸರ್ಕಲ್​ ಬಳಿಯ ಎಚ್‌ಕ್ಯೂಟಿಸಿಯಿಂದ ತೆರಳುತ್ತಿದ್ದ ವೇಳೆ ಭದ್ರತಾ ಲೋಪ ಉಂಟಾಗಿ, ರಸ್ತೆಗೆ ನುಗ್ಗಿದ ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ನಲಪಾಡ್, ಚೊಂಬು ಪ್ರದರ್ಶಿಸಿದ್ದಾರೆ. ಕೂಡಲೇ ಮೊಹಮ್ಮದ್ ನಲಪಾಡ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

ಇನ್ನೂ ಮೋದಿ ಬೆಂಗಳೂರಿಗೆ ಬಂದಿರುವ ಹಿನ್ನೆಲೆ  ಭದ್ರತೆಗಾಗಿ ಬರೊಬ್ಬರಿ ಎರಡು ಸಾವಿರ ಪೊಲೀಸರನ್ನು ನಿಯೋಜಿಸಿದ್ದರು, ಈ ಘಟನೆ ಎದುರಾಗಿದೆ.

ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸತೀಶ್ ಕುಮಾರ್, ರಮನ್ ಗುಪ್ತಾ ನೇತೃತ್ವದಲ್ಲಿ ಭದ್ರತೆ ಮಾಡಲಾಗಿತ್ತು. ಬಂದೋಬಸ್ತ್​​ಗಾಗಿ ನಾಲ್ವರು ಡಿಸಿಪಿ, ಎಸಿಪಿ, ಇನ್ಸ್ ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಹೆಡ್​ ಕಾನ್ಸ್​ಟೇಬಲ್​, ಪೊಲೀಸ್​ ಪೇದೆ, ಸಂಚಾರ ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಜ್ರಿವಾಲ್‌ರನ್ನು ಜೈಲಿನಲ್ಲಿ ನಿಧಾನವಾಗಿ ಸಾವಿನೆಡೆಗೆ ತಳ್ಳಲಾಗುತ್ತಿದೆ: ಎಎಪಿ ಆರೋಪ