Select Your Language

Notifications

webdunia
webdunia
webdunia
webdunia

ಮಾಜಿ ಸಿಎಂ ಕ್ಷೇತ್ರದಲ್ಲಿ ಶಿಕ್ಷಕಿ, ಶಿಕ್ಷಕನಿಂದ ವರದಿಗಾರನ ಮೇಲೆ ಹಲ್ಲೆ!

ಮಾಜಿ ಸಿಎಂ ಕ್ಷೇತ್ರದಲ್ಲಿ ಶಿಕ್ಷಕಿ, ಶಿಕ್ಷಕನಿಂದ ವರದಿಗಾರನ ಮೇಲೆ ಹಲ್ಲೆ!
ಬಾಗಲಕೋಟೆ , ಗುರುವಾರ, 9 ಆಗಸ್ಟ್ 2018 (14:08 IST)
ವರದಿಮಾಡಲು ತೆರಳಿದ್ದ ಖಾಸಗಿ ವಾಹಿನಿ ವರದಿಗಾರನ ಮೇಲೆ ಸರಕಾರಿ ಶಾಲೆ ಶಿಕ್ಷಕಿ ಹಾಗೂ ಶಿಕ್ಷಕಿಯ ಬೆಂಬಲಿಗರಿಂದ ಹಲ್ಲೆ ನಡೆದಿದೆ. ವರದಿ ಮಾಡಲು ಹೋಗಿದ್ದ ಬಾಗಲಕೋಟೆ ಸುದ್ದಿ ವಾಹಿನಿ ವರದಿಗಾರ ಸುರೇಶ್ ಕಡ್ಲಿಮಟ್ಟಿ ಮೇಲೆ ಶಿಕ್ಷಕಿ ಹಾಗೂ ಶಿಕ್ಷಕಿಯ ಬೆಂಬಲಿಗರಿಂದ ಹಲ್ಲೆ ನಡೆದಿದೆ.

ಬ್ಯಾಗ್ ನಲ್ಲಿದ್ದ ಐದುನೂರು ರೂಪಾಯಿ ಕಾಣದ ಹಿನ್ನೆಲೆ ವಿದ್ಯಾರ್ಥಿಗಳನ್ನು ಶಿಕ್ಷಕ, ಶಿಕ್ಷಕಿ ಹಿಗ್ಗಾಮುಗ್ಗಾ ಥಳಿಸಿದ್ದರು.  ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ರಾಘಾಪುರ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಅಶ್ವಿನಿ ಅಂಗಡಿ‌ ಮತ್ತು  ಶಿಕ್ಷಕ ಚಂದ್ರು ದಾಸರ ಇಬ್ಬರೂ ಸೇರಿಕೊಂಡು ಐದನೇ ತರಗತಿಯ ಹತ್ತಕ್ಕೂ ಹೆಚ್ಚು ವಿಧ್ಯಾರ್ಥಿಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಬೆನ್ನು , ತೊಡೆ, ಸೊಂಟದ ಭಾಗದಲ್ಲಿ ಬಾಸುಂಡೆಗಳು ಕಾಣಿಸಿಕೊಂಡಿವೆ. ವಿದ್ಯಾರ್ಥಿಗಳು ಹಣ ಕದ್ದಿದ್ದಾರೆ ಎಂದ ಆರೋಪಿಸಿ ಸಾಮೂಹಿಕವಾಗಿ ವಿದ್ಯಾರ್ಥಿಗಳಿಗೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಪೋಷಕರು ಶಿಕ್ಷಕ ಚಂದ್ರು ದಾಸರ ಮತ್ತು ಶಿಕ್ಷಕಿ ಅಶ್ವಿನಿ ಅಂಗಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ರಾಜಿಪಂಚಾಯಿತಿ ಮಾಡಿ ವಿಷಯ ಮುಂದುವರೆಸದೆ  ಮುಚ್ಚಿ ಹಾಕಲಾಗಿದೆ. ಘಟನೆ ಸಂಬಂಧ ವರದಿ ಮಾಡಲು ಹೋಗಿದ್ದ ವರದಿಗಾರನಿಗೆ ಶಿಕ್ಷಕಿ, ಶಿಕ್ಷಕ ಅವಾಜ್ ಹಾಕಿದ್ದಾರೆ.

ಅಲ್ಲದೇ ಹಲ್ಲೆ ಮಾಡಿದ್ದಾರೆ. ಮಾಜಿ ಸಿಎಮ್ ಸಿದ್ರಾಮಯ್ಯ ಅವರ ಕ್ಷೇತ್ರದಲ್ಲಿ ಶಿಕ್ಷಕಿಯೋರ್ವಳು ಈ ರೀತಿ ಗೂಂಡಾ ವರ್ತನೆ ತೋರಿಸ್ತಿದ್ದಾಳೆ ಅಂದ್ರೆ ಇಲ್ಲಿನ ಬಿಇಓ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಯೇ ಅಂತ ಪ್ರಶ್ನೆ ಮೂಡುತ್ತಿದೆ. ಇಷ್ಟೆಲ್ಲಾ ಘಟನೆ ನಡೆದರೂ ಅವರ ಮೇಲೆ ಯಾವುದೇ ಕ್ರಮಕ್ಕೆ‌ ಮುಂದಾಗ್ತಿಲ್ಲ ಅನ್ನೋದೆ ಹಲವು ಸಂಶಯಕ್ಕೆಡೆ ಮಾಡಿಕೊಟ್ಟಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಅಹೋರಾತ್ರಿ ಧರಣಿ ಕುಳಿತ ಮಹಿಳಾ ಕಾರ್ಯಕರ್ತೆಯರು