Select Your Language

Notifications

webdunia
webdunia
webdunia
webdunia

ಬಜೆಟ್ ನಲ್ಲಿ ಕೊಡುಗೆ ಕೊಡಲು ರೆಡಿಯಾದ ಮೋದಿ!

ಬಜೆಟ್ ನಲ್ಲಿ ಕೊಡುಗೆ ಕೊಡಲು ರೆಡಿಯಾದ ಮೋದಿ!
ನವದೆಹಲಿ , ಭಾನುವಾರ, 27 ಜನವರಿ 2019 (15:57 IST)
ಪಂಚ ರಾಜ್ಯ ಚುನಾವಣೆಗಳಲ್ಲಿ ಹಿನ್ನೆಡೆಯಾದ ನಂತರ ಎಚ್ಚೆತ್ತುಕೊಂಡಿರುವ ಪ್ರಧಾನಿ ಮೋದಿ ಅವರು, ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರೈತರು, ಸಣ್ಣ ವ್ಯಾಪಾರಸ್ಥರು ಮತ್ತು ಮಧ್ಯಮ ವರ್ಗದವರ ಓಲೈಕೆಗೆ ಮುಂದಾಗಿದ್ದಾರೆ.  ಜನಪ್ರಿಯ ಯೋಜನೆಗಳನ್ನು ಬಜೆಟ್ನಲ್ಲಿ ಪ್ರಕಟಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.

ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲೂ ಅತಂತ್ರ ಲೋಕಸಭೆ ಸೃಷ್ಠಿಯಾಗಲಿದೆ. ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಬಹುಮತಕ್ಕೆ ಕೆಲ ಸ್ಥಾನಗಳು ಕೊರತೆಯಾಗಬಹುದು ಎಂದು ಹೇಳಿರುವುದು ಬಿಜೆಪಿಯ ನಿದ್ದೆಗೆಡಿಸಿದ್ದು, ಎಲ್ಲ ಹಿನ್ನೆಲೆಯಲ್ಲಿ ಸರಳ ಬಹುಮತ ಪಡೆಯಲು ಕಸರತ್ತು ನಡೆಸಿರುವ ಬಿಜೆಪಿ, ಜನಪ್ರಿಯ ಯೋಜನೆಗಳ ಮೂಲಕ ರೈತರು, ಮಧ್ಯಮ ವರ್ಗದವರು ಮತ್ತು ಸಣ್ಣ ವ್ಯಾಪಾರಸ್ಥರನ್ನು ಸೆಳೆಯುವ ತಂತ್ರ ನಡೆಸಿದೆ.
ಕೇಂದ್ರ ಸರ್ಕಾರದ ಬಾರಿಯ ಬಜೆಟ್ ಜನಪ್ರಿಯ ಬಜೆಟ್ ಆಗಲಿದ್ದು, ಹಲವು ಅಗ್ಗದ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಪ್ರಕಟಿಸುವ ಸಾಧ್ಯತೆಗಳಿವೆ.

ರೈತರ ಸಾಲಮನ್ನಾ, ರೈತರಿಗೆ ಬಡ್ಡಿರಹಿತ ಸಾಲ ನೀಡುವುದುಸಣ್ಣ ವ್ಯಾಪಾರಸ್ಥರಿಗೆ ನೆರವು, ಮೀಸಲಾತಿ ಜಾರಿ ಮತ್ತಿತರ ಯೋಜನೆ ಪ್ರಕಟಿಸುವ ಸಾಧ್ಯತೆ ಇದೆ.  



Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕ ಗಾಂಧಿಯಿಂದ ಪಕ್ಷಕ್ಕೆ ಬಲ ಎಂದ ಖರ್ಗೆ