Select Your Language

Notifications

webdunia
webdunia
webdunia
webdunia

ಸಿಎಂ ಕಚೇರಿ ಎದುರು ಧರಣಿ ನಡೆಸುವುದಾಗಿ ರೇವಣ್ಣ ಎಚ್ಚರಿಕೆ

ಸಿಎಂ ಕಚೇರಿ ಎದುರು ಧರಣಿ ನಡೆಸುವುದಾಗಿ ರೇವಣ್ಣ ಎಚ್ಚರಿಕೆ
bangalore , ಮಂಗಳವಾರ, 18 ಜನವರಿ 2022 (20:53 IST)
ಬೆಂಗಳೂರು: ಹೊಳೆನರಸಿಪುರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಹೊಸದಾಗಿ ಎಂ.ಎಸ್ಸಿ ಸೈಕಾಲಜಿ ಮತ್ತು ಎಂಎಸ್ಸಿ ಫುಡ್ & ನ್ಯೂಟ್ರಿಷನ್ ಸೇರಿದಂತೆ 12 ಸ್ನಾತಕೋತ್ತರ ಕೋರ್ಸಗಳನ್ನು ಮಂಜೂರು ಮಾಡುವ ಬೇಡಿಕೆ ನಿರಾಕರಣೆ ಮಾಡಿರುವುದನ್ನು ಖಂಡಿಸಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಧರಣಿ ನಡೆಸುವುದಾಗಿ ತಿಳಿಸಿದ್ದಾರೆ.
ಕೃಷ್ಣಾಗೆ ಆಗಮಿಸಿದ ರೇವಣ್ಣ ಹೊಳೆನರಸೀಪುರ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿಗೆ 2022-23ನೇ ಶೈಕ್ಷಣಿಕ ಸಾಲಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಹೊಸದಾಗಿ ಎಂ.ಎಸ್ಸಿ ಸೈಕಾಲಜಿ ಮತ್ತು ಎಂಎಸ್ಸಿ ಫುಡ್ & ನ್ಯೂಟ್ರಿಷನ್ ಸೇರಿದಂತೆ 12 ಸ್ನಾತಕೋತ್ತರ ಕೋರ್ಸಗಳನ್ನು ಮಂಜೂರು ಮಾಡಲು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆಗೆ ಶಿಫಾರಸ್ಸು ಮಾಡಿದ್ದರು. ಆದ್ರೂ ಸಹ ಉನ್ನತ ಶಿಕ್ಷಣ ಸಚಿವರು ಪ್ರಸ್ತಾವನೆಯನ್ನು ತಿರಸ್ಕರಿಸಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿದ್ದಾರೆ.
ನನ್ನ ಕ್ಷೇತ್ರದ ಶೈಕ್ಷಣಿಕ ಹಿತದೃಷ್ಟಿಯಿಂದ ಇದನ್ನು ಪ್ರತಿಭಟಿಸುವ ಸಲುವಾಗಿ ಮುಖ್ಯಮಂತ್ರಿಯವರ ಗೃಹಕಛೇರಿ ” ಕೃಷ್ಣಾ ” ದ ಆವರಣದಲ್ಲಿ ಕೊರೊನಾ ನಿಯಮ ಪಾಲಿಸಿ ಏಕಾಂಗಿಯಾಗಿ ಧರಣಿ ನಡೆಸಲು ನಿರ್ಧರಿಸಿದ್ದೇನೆ ಎಂದು ಕೃಷ್ಣಾವನ್ನು ಪ್ರವೇಶಿಸಿದ್ದು, ಸಿಎಂ ಕಚೇರಿ ಸಿಬ್ಬಂದಿ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಬೇಡಿಕೆ ಈಡೇರದೇ ಇದ್ದಲ್ಲಿ ರೇವಣ್ಣ ಕೃಷ್ಣಾದಲ್ಲೇ ಧರಣಿ ನಡೆಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಚಿಕಿತ್ಸೆ: ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಸಚಿವಾಲಯ