ಬಾಲಕಿ ಮೇಲೆ ಅತ್ಯಾಚಾರ ಯತ್ನ ಶಂಕೆ: ಥಳಿತ

Webdunia
ಶನಿವಾರ, 14 ಜುಲೈ 2018 (19:26 IST)
ಕುಡಿದ ಅಮಲಿನಲ್ಲಿ ನಾಲ್ಕುವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಶಂಕಿಸಿ  ಯುವಕನೋರ್ವನನ್ನ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಗದಗ ನಗರದಲ್ಲಿ ನಡೆದಿದೆ. ನಗರದ ಗಂಜಿಬಸವೇಶ್ವರ ಸರ್ಕಲ್ ಬಳಿ ರಾತ್ರಿ ವೇಳೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದೆ. ನಾಲ್ಕು ವರ್ಷದ ಬಾಲಕಿ ರಾತ್ರಿ ಮನೆ ಮುಂದೆ ಆಟವಾಡುತ್ತಿತ್ತು. ಸ್ಥಳಿಯ ಅಶೋಕ ಎಂಬ ಯುವಕ ಕುಡಿದ ಅಮಲಿನಲ್ಲಿ ಮಗುವನ್ನು ಎತ್ತಿಕೊಳ್ಳಲು ಮುಂದಾಗಿದ್ದಾನೆ.

ಬಾಲಕಿ ಅಳಲು ಪ್ರಾರಂಭಿಸಿದ್ದರಿಂದ ಕುಡಿದ ಅಮಲಿನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆಂದು ಶಂಕಿಸಿ ಬಾಲಕಿ ಕುಟುಂಬದವರು ಅಶೋಕ ಎಂಬ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಥಳಿತಕ್ಕೊಳಗಾದ ಯುವಕನ ತಲೆಗೆ ತೀವ್ರ ಗಾಯವಾಗಿದೆ. ಕೆಲಕಾಲ ರಕ್ತಸ್ರಾವ ದಿಂದ ನರಳಾಡಿದ್ದಾನೆ. ಕೆಲಕಾಲ ಹೈಡ್ರಾಮಾ‌ ಸೃಷ್ಟಿಯಾಗಿತ್ತು. ನಂತರ ಆಸ್ಪತ್ರೆಗೆ ದಾಖಲಿಸಿ‌ ಚಿಕಿತ್ಸೆ ನೀಡಲಾಗಿದೆ. ಗದಗ ಶಹರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದಾರೆ. ಪೊಲೀಸರು ಎರಡು ಕುಟುಂಬದವರಿಂದ ವಿಚಾರ‌ಣೆಗೆ ಮುಂದಾಗಿದ್ದಾರೆ.

ಪತ್ನಿಯ ನೆರವಿನಿಂದ ಗೆಳೆಯನ ಹೆಂಡತಿಯ ಮೇಲೆ ಗಂಡ ಎಸಗಿದ ರೇಪ್ , ವಿಡಿಯೋ ಚಿತ್ರೀಕರಿಸಿದ ಪತ್ನಿ

2019 ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಸುಷ್ಮಾ ಸ್ವರಾಜ್: ಕಾರಣವೇನು ಗೊತ್ತಾ?!

ಅಮ್ಮನ ಸ್ನೇಹಿತನಿಂದಲೇ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ

ಅಪ್ಪಿತಪ್ಪಿಯೂ ಈ ವೇಳೆ ಅರಳಿಮರಕ್ಕೆ ಪೂಜೆ ಮಾಡಬೇಡಿ. ಯಾಕೆ ಗೊತ್ತಾ?

ನಿರ್ಮಾಪಕ ಸಾರಾ ಗೋವಿಂದ್ ಪುತ್ರ ಅನೂಪ್ ವಿರುದ್ಧ ದೂರು: ಕಾರಣವೇನು ಗೊತ್ತಾ?

ಸಂಬಂಧಿಸಿದ ಸುದ್ದಿ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

2019 ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಸುಷ್ಮಾ ಸ್ವರಾಜ್: ಕಾರಣವೇನು ಗೊತ್ತಾ?!

ಸಿಎಂಗೆ ಒಳ್ಳೆ ಬುದ್ಧಿ ಕೊಡಲಿ ಎಂದು ದೀರ್ಘದಂಡ ನಮಸ್ಕಾರ ಹಾಕಿದ ರೈತರು!

ಮುಂದಿನ ಸುದ್ದಿ