Select Your Language

Notifications

webdunia
webdunia
webdunia
webdunia

ರಾಜ್ಯಸಭೆ ಚುನಾವಣೆ: ಮತಗಟ್ಟೆಯಲ್ಲಿ ಗದ್ದಲವೆಬ್ಬಿಸಿದ ಜೆಡಿಎಸ್ ನಾಯಕರು! ಚುನಾವಣೆ ಸ್ಥಗಿತ!

ರಾಜ್ಯಸಭೆ ಚುನಾವಣೆ: ಮತಗಟ್ಟೆಯಲ್ಲಿ ಗದ್ದಲವೆಬ್ಬಿಸಿದ ಜೆಡಿಎಸ್ ನಾಯಕರು! ಚುನಾವಣೆ ಸ್ಥಗಿತ!
ಬೆಂಗಳೂರು , ಶುಕ್ರವಾರ, 23 ಮಾರ್ಚ್ 2018 (11:28 IST)
ಬೆಂಗಳೂರು: ವಿಧಾನಸೌಧದಲ್ಲಿ ನಡೆಯುತ್ತಿರುವ ರಾಜ್ಯ ಸಭೆ ಮತದಾನದ ಸಂದರ್ಭ ಚುನಾವಣಾಧಿಕಾರಿಗಳು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಜೆಡಿಎಸ್ ನಾಯಕರು ಗದ್ದಲವೆಬ್ಬಿಸಿದ್ದಾರೆ.
 

ಕಾಂಗ್ರೆಸ್ ಶಾಸಕರಾದ ಕಾಗೋಡು ತಿಮ್ಮಪ್ಪ ಮತ್ತು ಬಾಬೂರಾವ್ ಚಿಂಚನಸೂರ್ ಅವರಿಗೆ ಎರಡು ಮತ ಪತ್ರ ನೀಡಿದ್ದಕ್ಕೆ ಸಿಟ್ಟಿಗೆದ್ದ ಜೆಡಿಎಸ್ ಸದಸ್ಯರು ಗದ್ದಲವೆಬ್ಬಿಸಿದ್ದು, ಎಚ್ ಡಿ ರೇವಣ್ಣ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

ಬಳಿಕ ಜೆಡಿಎಸ್ ಅಭ್ಯರ್ಥಿ ಬಿಎಂ ಫಾರೂಖ್ ಮುಖ್ಯ ಚುನಾವಣಾಧಿಕಾರಿಗಳಿಗೆ, ಸ್ಥಳದಲ್ಲಿದ್ದ ಚುನಾವಣಾಧಿಕಾರಿ ಎಸ್ ಮೂರ್ತಿ ವಿರುದ್ಧ ದೂರು ಸಲ್ಲಿಸಿದರು. ಈ ಗದ್ದಲದಿಂದಾಗಿ ಕೆಲ ಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಷದ ಗೆಲುವಿಗೆ ಹಳೆಯ ಪ್ರಬಲ ಅಸ್ತ್ರವೊಂದನ್ನು ಬಳಸಲು ನಿರ್ಧಾರ ಮಾಡಿದ ಕಾಂಗ್ರೆಸ್