Select Your Language

Notifications

webdunia
webdunia
webdunia
webdunia

ಮತ್ತೆ ರಾಜಕೀಯದತ್ತ ಮುಖಮಾಡಿದ ಮಳೆ ಹುಡುಗಿ ಪೂಜಾ ಗಾಂಧಿ; ಈ ಬಾರಿ ಪಕ್ಷ ಯಾವುದು ಗೊತ್ತಾ..?

ಮತ್ತೆ ರಾಜಕೀಯದತ್ತ ಮುಖಮಾಡಿದ ಮಳೆ ಹುಡುಗಿ ಪೂಜಾ ಗಾಂಧಿ; ಈ ಬಾರಿ ಪಕ್ಷ ಯಾವುದು ಗೊತ್ತಾ..?
ಬೆಂಗಳೂರು , ಶನಿವಾರ, 24 ಮಾರ್ಚ್ 2018 (06:22 IST)
ಬೆಂಗಳೂರು : ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗ ಸಿನಿಮಾ ತಾರೆಯರು ಕೂಡ ರಾಜಕೀಯ ಕಣಕ್ಕಿಳಿದಿರುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಈ ಮಧ್ಯ ಈಗ ಮಳೆ ಹುಡುಗಿ ಪೂಜಾ ಗಾಂಧಿ ಅವರು ಕೂಡ ಮತ್ತೆ ರಾಜಕೀಯ ಪಕ್ಷವೊಂದಕ್ಕೆ ಸೇರಲು ಮುಂದಾಗಿದ್ದಾರಂತೆ.


ಗೋಲ್ಡನ್ ಸ್ಟಾರ್ ಗಣೇಶ್ ಅವರು ನಟಿಸಿದ ಸೂಪರ್ ಹಿಟ್ ಸಿನಿಮಾ 'ಮುಂಗಾರು ಮಳೆ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಪೂಜಾ ಗಾಂಧಿ ಅವರು ಕನ್ನಡದಲ್ಲಿ ಕೆಲವು ಸಿನಿಮಾ ಗಳಲ್ಲಿ ನಟಿಸಿ ನಂತರ ರಾಜಕೀಯದತ್ತ ಮುಖಮಾಡಿದರು. ಮೊದಲು ಜೆಡಿಎಸ್ ಪಕ್ಷ ಸೇರ್ಪಡೆಗೊಂಡು, ನಂತರ ಒಂದು ವರ್ಷದೊಳಗೆ ಜೆಡಿಎಸ್ ಬಿಟ್ಟು ಕೆಜೆಪಿ (ಕರ್ನಾಟಕ ಜನತಾ ಪಕ್ಷ) ಸೇರಿದರು. ಅನಂತರ ಶ್ರೀರಾಮುಲು ಅವರ ಬಡವರ ಶ್ರಮಿಕರ ಕಾಂಗ್ರೆಸ್ ಪಕ್ಷ (ಬಿ.ಎಸ್.ಆರ್ ಕಾಂಗ್ರೆಸ್) ಸೇರಿ ಅಲ್ಲಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದರು.


ಆದರೆ ಇದೀಗ ಚುನಾವಣೆಯ ಸಮೀಪಿಸುತ್ತಿದ್ದ ಈ ಸಂದರ್ಭದಲ್ಲಿ ಬಿಜೆಪಿ ಪಕ್ಷ ಸೇರಲು ಪೂಜಾ ಗಾಂಧಿ ಅವರು ನಿರ್ಧಾರ ಮಾಡಿದ್ದು, ಈ ಬಗ್ಗೆ ಯಡಿಯೂರಪ್ಪ ಅವರಲ್ಲಿ ಮಾತುಕತೆ ಕೂಡ ನಡೆಸಿರುವುದಾಗಿ ತಿಳಿದುಬಂದಿದೆ. ಆದರೆ ಮೂರ್ನಾಲ್ಕು ಪಕ್ಷ ಬದಲಾಯಿಸಿರುವ ಪೂಜಾ ಗಾಂಧಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಲುವ ವಿಚಾರದಲ್ಲಿ ಬಿಜೆಪಿ ನಾಯಕರಿಂದ  ಬಾರೀ ವಿರೋಧ ವ್ಯಕ್ತವಾಗಿದ್ದರಿಂದ ಈ ವಿಚಾರವನ್ನು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಅವರ ತೀರ್ಮಾನಕ್ಕೆ ಬಿಟ್ಟಿರುವುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆಗೆ ಈ ಕ್ಷೇತ್ರದಿಂದ ಸ್ಪರ್ಧಿಸಲು ಹೊರಟ ನಟಿ ಮಾಳವಿಕಾ ಅವಿನಾಶ್