Select Your Language

Notifications

webdunia
webdunia
webdunia
webdunia

ಮಾದಕವಸ್ತುಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದ ಪೊಲೀಸ್ ರು

ಮಾದಕವಸ್ತುಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದ ಪೊಲೀಸ್ ರು
ಆನೇಕಲ್ , ಮಂಗಳವಾರ, 26 ಜೂನ್ 2018 (19:36 IST)
ಕಾಲೇಜು ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಮಾದಕವಸ್ತುಗಳ ದಾಸರಾಗಿ ಜೀವನವನ್ನು ಹಾಳು ಮಾಡಿಕೊಳ್ತಿದ್ದಾರೆ. ಇನ್ನು ವಿದ್ಯಾರ್ಥಿಗಳಿಗೆ ತಿಳಿಹೇಳಲು ನಮ್ಮ ಪೊಲೀಸ್ ಸಿಬ್ಬಂದಿ ಮುಂದಾಗಿದ್ದಾರೆ.

ಆನೇಕಲ್ ಹೊರವಲಯ ಅತ್ತಿಬೆಲೆಯ ಜಯಭಾರತಿ ಕಾಲೇಜಿನಲ್ಲಿ   ಮಾದಕ ವಸ್ತುಗಳ ಮತ್ತು ಅದರಿಂದ ಆಗುವ ಅನಾಹುತಗಳ ಬಗ್ಗೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವಿಭಾಗದ ಅತ್ತಿಬೆಲೆ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕರಾದ ವೈ.ರಾಜೇಶ್ ನೇತೃತ್ವದಲ್ಲಿ  ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ಅದರಿಂದ ಆಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವೃತ್ತ ನಿರೀಕ್ಷಕರಾದ ವೈ.ರಾಜೇಶ್, ಪ್ರತಿಷ್ಟಿತ ಕಾಲೇಜ್- ಹಾಸ್ಟೆಲ್ ಇನ್ನು ಪ್ರಮುಖ ಸ್ಥಳಗಳಲ್ಲಿ ಮಾದಕ ವಸ್ತುಗಳ ಚಟುವಟಿಕೆಗಳು ನಡೆಯುತ್ತವೆ. ನಮ್ಮ ಪೋಲಿಸ್ ಇಲಾಖೆಯು ಸಹ ಇದರ ಬಗ್ಗೆ ಕಟ್ಟುನಿಟ್ಟಾಗಿ ಕಾರ್ಯನಿರ್ವಾಹಿಸುತ್ತಿದೆ. ಇದರಿಂದ ಈಗಿನ ಯುವಜನತೆ ಎಚ್ಚೆತ್ತು  ಅದರಿಂದ ದೂರ ಬರಬೇಕು ಈಗಾಗಲೇ ದಾಸರಾಗಿರುವವರು ಅದರಿಂದ ಹೊರಬರಲು ನಾವು ಸಹಾಯ ಮಾಡುತ್ತೇವೆ ಎಂದು ತಿಳಿಸಿದರು.

ಇನ್ನು ಪೋಲಿಸರು ಎಂದರೆ ಭಯ ಪಡುವ ಈಗಿನ ವ್ಯವಸ್ಥೆಯಲ್ಲಿ ಪೊಲೀಸ್ ರು ಇಂತಹ ಒಳ್ಳೆಯ ಕಾರ್ಯಕ್ರಮಗಳ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್‍ಮಲ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ ಏನಿದೆ ಗೊತ್ತಾ?