Select Your Language

Notifications

webdunia
webdunia
webdunia
webdunia

ಉಸ್ತುವಾರಿ ಸಚಿವರ ಸ್ವಕ್ಷೇತ್ರದಿಂದಲೇ ಗುಳೆ ಹೊರಟ ಜನ!

ಉಸ್ತುವಾರಿ ಸಚಿವರ ಸ್ವಕ್ಷೇತ್ರದಿಂದಲೇ ಗುಳೆ ಹೊರಟ ಜನ!
ರಾಯಚೂರು , ಭಾನುವಾರ, 3 ಫೆಬ್ರವರಿ 2019 (19:51 IST)
ಭೀಕರ ಬರಗಾಲದಿಂದ ತತ್ತರಿಸಿರುವ ಜನ ತಮ್ಮ ಹೊಟ್ಟೆಪಾಡಿಗಾಗಿ ಗುಳೆ ಹೋಗುತ್ತಿರುವ ಪರಿಸ್ಥಿತಿ ಮತ್ತೆ ನಿರ್ಮಾಣವಾಗಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಗುಳೆ ಹೋಗುವುದು ಸರ್ವೇ ಸಾಮಾನ್ಯವಾಗಿದೆ.

ಹೇಳುವುದಕ್ಕೆ ಮಾತ್ರ ಇದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡರ ಸ್ವಕ್ಷೇತ್ರ. ಆದರೆ ಇಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ. ಈ ಬಾರಿ ಮಳೆ ಕೈಕೊಟ್ಟಿರುವ ಕಾರಣ, ಅನ್ನದಾತ ರೋಸಿ ಹೋಗಿದ್ದಾನೆ. ಕೃಷಿಯನ್ನೇ ನಂಬಿಕೊಂಡಿದ್ದ ಅನೇಕ ರೈತರು, ಕೂಲಿಕಾರರು, ಕುಟುಂಬ ಸಮೇತವಾಗಿ ಗಂಟು‌ ಮೂಟ್ಟೆ ಕಟ್ಟಿಕೊಂಡು ಕೂಲಿ ಕೆಲಸಕ್ಕೆ ರಾಜ್ಯ ರಾಜಧಾನಿ ಹಾಗೂ ಪರ ರಾಜ್ಯಗಳತ್ತ ಕಡೆ ಮುಖ ಮಾಡುತ್ತಿದ್ದಾರೆ. 

ಗ್ರಾಮದಿಂದ ಸುಮಾರು 40ಕ್ಕೂ ಹೆಚ್ಚು ಜನ, ವಯೋವೃದ್ಧರನ್ನ ಮನೆಯಲ್ಲೇ ಬಿಟ್ಟು, ಮಕ್ಕಳೊಂದಿಗೆ ತುತ್ತಿನ ಚೀಲ ತುಂಬಿಸಿಕೊಳ್ಳುವುದಕ್ಕೆ ಬೆಂಗಳೂರಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ತುಂಗಭದ್ರಾ ನದಿಯಿಂದ 2ನೇ  ಬೆಳೆಗೆ ನೀರು‌ ಬಿಡಲು ಸಾಧ್ಯವಿಲ್ಲವೆಂದು ಹೇಳಿರುವ ಕಾರಣ ರೈತರಿಗೆ ಗಾಯದ ಮೇಲೆ ಬರೆ ಎಳದಂತಾಗಿದೆ. ಹಿಂದಿನಿಂದಲೂ ಜಿಲ್ಲೆಯಲ್ಲಿ ಗುಳೆ ಹೋಗುವ ಪದ್ಧತಿ ಇದ್ದು, ಆಳುವ ಸರ್ಕಾರದ ಸಚಿವರ ಸ್ವಕ್ಷೇತ್ರದಲ್ಲಿ ಇಂತಹ‌ ಪರಿಸ್ಥಿತಿಯಾದರೇ ಬೇರೆ ಕ್ಷೇತ್ರಗಳ ಗತಿಯೇನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮದ ಬಗ್ಗೆ ಮಾತನಾಡುವ ಜಿಜ್ಞಾಸೆ ನನಗಿಲ್ಲ ಎಂದ ಕೇಂದ್ರ ಸಚಿವ