Select Your Language

Notifications

webdunia
webdunia
webdunia
webdunia

ಜಂಬೂಸವಾರಿ ಮೆರವಣಿಗೆ ರಂಗು ನೀಡಿದ ಸ್ತಬ್ದಚಿತ್ರಗಳು

ಜಂಬೂಸವಾರಿ ಮೆರವಣಿಗೆ ರಂಗು ನೀಡಿದ ಸ್ತಬ್ದಚಿತ್ರಗಳು
ಮೈಸೂರು , ಶನಿವಾರ, 30 ಸೆಪ್ಟಂಬರ್ 2017 (16:04 IST)
ಮೈಸೂರು: ಜಂಬೂಸವಾರಿ ದಸರಾದ ಪ್ರಮುಖ ಆಕರ್ಷಣೆ. ರಾಜ್ಯದ ಐತಿಹಾಸಿಕ ಹಿನ್ನೆಲೆ, ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿ ಬಿಂಬಿಸುವ ಸ್ತಬ್ದಚಿತ್ರಗಳು ಎಲ್ಲರನ್ನ ಆಕರ್ಷಿಸುತ್ತಿವೆ.

ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ 40 ಸ್ತಬ್ದ ಚಿತ್ರಗಳು ಸಾಗುತ್ತಿವೆ. ಕಲೆ, ಸಂಸ್ಕೃತಿ ಜತೆಗೆ ಪರಿಸರ, ಅರಣ್ಯೀಕರಣ, ಅಂತರ್ಜಲ, ಪರಿಸರ ಸ್ನೇಹಿ, ಪ್ರವಾಸೋದ್ಯಮ ಹಾಗೂ ರಾಜ್ಯ ಸರ್ಕಾರದ ವಿಶೇಷ ಸಾಧನೆ ಬಿಂಬಿಸುವ ಸ್ತಬ್ದ ಚಿತ್ರಗಳು ಮೆರವಣಿಗೆಯಲ್ಲಿ ಸಾಗುತ್ತಿವೆ.

ನಿಶಾನೆ ಆನೆ ಬಲರಾಮ ಜಂಬೂಸವಾರಿ ಮೆರವಣಿಗೆ ಸಾಗಬೇಕಾದ ದಿಕ್ಕನ್ನು ಸೂಚಿಸುತ್ತಾ ಮುಂಚೂಣಿಯಲ್ಲಿ ಸಾಗುತ್ತಿದ್ದಾನೆ. ಚಿತ್ತಾಕರ್ಷಕ ಅಲಂಕಾರದೊಂದಿಗೆ ಕಂಗೊಳಿಸುತ್ತಾ ಸಾಗುತ್ತಿರುವ ಗಜಪಡೆ ಜಂಬೂಸವಾರಿ ಮೆರವಣಿಗೆಗೆ ಮೆರುಗು ತಂದಿವೆ. ಮೆರವಣಿಗೆ ಸಾಗುವ ರಸ್ತೆಯ ಎರಡೂ ಬದಿಯಲ್ಲಿ ವೀಕ್ಷಿಸಲು ಜನಸ್ತೋಮ ಕಿಕ್ಕಿರಿದು ನೆರೆದಿದೆ.

ಮೆರವಣಿಗೆ ಸಾಗುತ್ತಿರುವ ಮಾರ್ಗದುದ್ದಕ್ಕೂ ಸಾವಿರಾರು ಪೊಲೀಸರು ಬಂದೋಬಸ್ತ್ ಒದಗಿಸಿದ್ದಾರೆ. ಇನ್ನು ಮೆರವಣಿಗೆ ವೀಕ್ಷಿಸುವ ಸಲುವಾಗಿ ರಸ್ತೆಯ ಇಕ್ಕೆಲಗಳಲ್ಲಿರುವ ಎತ್ತರವಾದ ಕಟ್ಟಡಗಳು, ಜಾಹಿರಾತು ಫಲಕಗಳು, ಮರಗಳ ಮೇಲೆ ಜನ ಕುಳಿತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೈಲು ದುರಂತ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ