Select Your Language

Notifications

webdunia
webdunia
webdunia
webdunia

ನ್ಯೂ ಇಯರ್ ಪಾರ್ಟಿ ಮಾಡುವವರಿಗೆ ನಮ್ಮ ಮೆಟ್ರೊ ಗುಡ್ ನ್ಯೂಸ್

ನ್ಯೂ ಇಯರ್ ಪಾರ್ಟಿ ಮಾಡುವವರಿಗೆ ನಮ್ಮ ಮೆಟ್ರೊ ಗುಡ್ ನ್ಯೂಸ್
ಬೆಂಗಳೂರು , ಶುಕ್ರವಾರ, 29 ಡಿಸೆಂಬರ್ 2023 (11:50 IST)
ಬೆಂಗಳೂರು: ಹೊಸ ವರ್ಷಾಚರಣೆಗಾಗಿ ಪಾರ್ಟಿ-ಗೀರ್ಟಿ ಮಾಡಿಕೊಂಡು ಸೆಲೆಬ್ರೇಷನ್ ಮಾಡುವ ಪ್ಲ್ಯಾನ್ ಇದ್ದರೆ ನಮ್ಮ ಮೆಟ್ರೊ ಕಡೆಯಿಂದ ನಿಮಗೆ ಗುಡ್ ನ್ಯೂಸ್ ಕಾದಿದೆ.

ಹೊಸ ವರ್ಷಾಚರಣೆ ಮಾಡಿಕೊಳ್ಳುವವರಿಗೆ ಅನುಕೂಲವಾಗುವಂತೆ ನಮ್ಮ ಮೆಟ್ರೊ ಸೇವೆಯನ್ನು ಡಿಸೆಂಬರ್ 31 ರಂದು ಬೆಳಗಿನ ಜಾವ 2 ಗಂಟೆಯವರೆಗೆ ವಿಸ್ತರಿಸಲು ನಮ್ಮ ಮೆಟ್ರೊ ತೀರ್ಮಾನಿಸಿದೆ. ಸಾಮಾನ್ಯವಾಗಿ ರಾತ್ರಿ 11.30 ರವರೆಗೆ ಮೆಟ್ರೊ ಸೇವೆಯಿರುತ್ತದೆ. ಆದರೆ ಈ ದಿನ ಮಾತ್ರ ವಿಶೇಷವಾಗಿ ಬೆಳಗಿನ ಜಾವ 2 ಗಂಟೆಯವರೆಗೆ ವಿಸ್ತರಣೆಯಾಗಲಿದೆ.

ಆದರೆ ಪ್ರಯಾಣಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಎಂಜಿ ರಸ್ತೆಯ ನಿಲ್ದಾಣಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಅದರ ಬದಲಾಗಿ  ಪ್ರಯಾಣಿಕರು ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ನಿಂದ ಮೆಟ್ರೊ ನಿಲ್ದಾಣಕ್ಕೆ ತೆರಳಬಹುದಾಗಿದೆ.

ಆದರೆ ಖುದ್ದಾಗಿ ಟಿಕೆಟ್ ಪಡೆದುಕೊಳ್ಳುವವರೂ ಮುಂಚಿತವಾಗಿಯೇ ಟಿಕೆಟ್ ಪಡೆದುಕೊಳ್ಳಬೇಕು. ಆದರೆ ಕ್ಯು ಆರ್ ಕೋಡ್ ಅಥವಾ ಸ್ಮಾರ್ಟ್ ಕಾರ್ಡ್ ಹೊಂದಿರುವವರು ಎಂದಿನಂತೆ ರಿಯಾಯಿತು ದರದಲ್ಲಿ ಟಿಕೆಟ್ ಖರೀದಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಚುನಾವಣೆಗೆ ಮೊದಲು ಪೆಟ್ರೋಲ್-ಡೀಸೆಲ್ ದರ ಇಳಿಕೆ ಪಕ್ಕಾ