Select Your Language

Notifications

webdunia
webdunia
webdunia
webdunia

ಮೋದಿ ಬಡತನ ನಿರ್ಮೂಲನೆ ಮಾಡುವ ಬದಲು ಬಡವರನ್ನೇ ನಿರ್ಮೂಲನೆ ಮಾಡುತ್ತಿದ್ದಾರೆ- ಪ್ರೊ.ಮಹೇಶ್ ಚಂದ್ರ ಗುರು

ಮೋದಿ ಬಡತನ ನಿರ್ಮೂಲನೆ ಮಾಡುವ ಬದಲು ಬಡವರನ್ನೇ ನಿರ್ಮೂಲನೆ ಮಾಡುತ್ತಿದ್ದಾರೆ- ಪ್ರೊ.ಮಹೇಶ್ ಚಂದ್ರ ಗುರು
ಮೈಸೂರು , ಶುಕ್ರವಾರ, 1 ಫೆಬ್ರವರಿ 2019 (05:44 IST)
ಮೈಸೂರು : ಕೇಂದ್ರ ಸರ್ಕಾರದ ಶೇ. 10 ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರೊ.ಮಹೇಶ್ ಚಂದ್ರ ಗುರು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.


ಕೇಂದ್ರ ಸರ್ಕಾರದ ಶೇ. 10 ಮೀಸಲಾತಿ ವಿರೊಧಿಸಿ ಪ್ರಗತಿಪರರಿಂದ ಖಾಸಗಿ ಹೋಟೆಲ್ ನಲ್ಲಿ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು,’ ಮೋದಿಗೆ ಧಮ್ ಇದ್ರೆ ಜನಸಂಖ್ಯೆ ಅಧಾರದ ಮೇಲೆ ಮೀಸಲಾತಿ ಜಾರಿ ತರಲಿ. ನರೇಂದ್ರ ಮೋದಿ ನಮ್ಮ ಬಹುಜನರ ಹಕ್ಕಿನ ಜೊತೆ ಚೆಲ್ಲಾಟ ವಾಡುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.


ಮೋದಿ ಬಡತನ ನಿರ್ಮೂಲನೆ ಮಾಡುವ ಬದಲು ಬಡವರನ್ನೇ ನಿರ್ಮೂಲನೆ ಮಾಡುತ್ತಿದ್ದಾರೆ. ಮೀಸಲಾತಿ ಎಲ್ಲಾ ಜನರಿಗೂ ಸಮವಾಗಿರಬೇಕು. ಬಂಡವಾಳ ಶಾಹಿಗಳ ಪರವಾಗಿರುವ ಪ್ರಧಾನಿ ಅವೈಜ್ಞಾನಿಕವಾಗಿ ಮೀಸಲಾತಿ ತರುತ್ತಿದ್ದಾರೆ. ಮೋದಿ ಪ್ರಧಾನಿ ಸ್ಥಾನಕ್ಕೆ ಅನ್ ಫಿಟ್ ಎಂದು ಅವರು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚೆಕ್ ಡ್ಯಾಂ ಧ್ವಂಸಕ್ಕೆ ಯತ್ನ