Select Your Language

Notifications

webdunia
webdunia
webdunia
webdunia

ಪುರುಷರು ಕೂಡ ಮಹಿಳೆಯರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾರಂತೆ !

ಪುರುಷರು ಕೂಡ ಮಹಿಳೆಯರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾರಂತೆ !
ಬೆಂಗಳೂರು , ಶುಕ್ರವಾರ, 10 ಆಗಸ್ಟ್ 2018 (15:47 IST)
ಬೆಂಗಳೂರು: ಯುಟ್ಯೂಬ್ ಸ್ಟಾರ್ ಹಾಗೂ ಒಂದು ನಟಿ ಸೇರಿ ವಿಡಿಯೋವೊಂದನ್ನು ಮಾಡಿದ್ದು, ಆ ಮೂಲಕ ಪುರುಷರೂ ಮಹಿಳೆಯರಿಂದ ಲೈಂಗಿಕ ಕಿರುಕುಳ ಅನುಭವಿಸುತ್ತಾರೆ ಎಂಬುದನ್ನು ತೋರಿಸಲು ಮುಂದಾಗಿದ್ದಾರೆ.


ಹೌದು. ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿರುವ ಘಟನೆಗಳನ್ನು ನಾವು ಹಲವು ಬಾರಿ ಕೇಳಿರುತ್ತೇವೆ . ಆದರೆ ಕೆಲವೊಮ್ಮೆ ಪುರುಷರು ಮಹಿಳೆಯರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾರೆ, ಆ ವೇಳೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಇವರೆಲ್ಲಾ ಸೇರಿ ವಿಡಿಯೋವೊಂದನ್ನು ಮಾಡಿದ್ದಾರೆ.


ಆ ವಿಡಿಯೋದಲ್ಲಿ ಮೊದಲು ಮಹಿಳೆ, ಪುರುಷನಿಗೆ ಲೈಂಗಿಕ ಕಿರುಕುಳ ನೀಡ್ತಾಳೆ. ಮಾಲ್ ನಲ್ಲಿದ್ದ ಜನ ಇದನ್ನು ನೋಡಿ ಸುಮ್ಮನೆ ಹೋಗುವುದಲ್ಲದೆ ಮಹಿಳೆಯನ್ನು ಹೊಗಳ್ತಾರೆ. ಎರಡನೇ ಭಾಗದಲ್ಲಿ ಪುರುಷ ಮಹಿಳೆಗೆ ಕಿರುಕುಳ ನೀಡುತ್ತಾನೆ. ಆಗ ಮಾಲ್ ನಲ್ಲಿರುವ ಜನರು ಆ ವ್ಯಕ್ತಿಗೆ ಬಾಯಿಗೆ ಬಂದಂತೆ ಬೈದು, ಮಹಿಳೆಯನ್ನು ರಕ್ಷಿಸಲು ಯತ್ನಿಸುತ್ತಾರೆ. ಈ ವಿಡಿಯೋದ ಕೊನೆಯಲ್ಲಿ ಪುರುಷ ಮತ್ತು ಮಹಿಳೆ ಇಬ್ಬರೂ  ಲೈಂಗಿಕ ಕಿರುಕುಳಕ್ಕೊಳಗಾಗುತ್ತಾರೆಂಬ ಸಂದೇಶ ಸಾರಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಮಹಿಳಾ ಸಹೋದ್ಯೋಗಿಯ ಮೇಲೆ ಅತ್ಯಾಚಾರವೆಸಗಿದ ಅಧಿಕಾರಿ