Select Your Language

Notifications

webdunia
webdunia
webdunia
webdunia

ಲೋಕಸಭೆ ಉಪಚುನಾವಣೆ: ಶಾಸಕ ಸಿ.ಟಿ.ರವಿ ಅಸಮಾಧಾನ

ಲೋಕಸಭೆ ಉಪಚುನಾವಣೆ: ಶಾಸಕ ಸಿ.ಟಿ.ರವಿ ಅಸಮಾಧಾನ
ಚಿಕ್ಕಮಗಳೂರು , ಸೋಮವಾರ, 8 ಅಕ್ಟೋಬರ್ 2018 (17:53 IST)
ಕೇವಲ 3 ತಿಂಗಳಿಗೋಸ್ಕರ ಲೋಕಸಭೆ ಉಪಚುನಾಚಣೆ ಬೇಕಿತ್ತಾ ಅನ್ನುವ ಪ್ರಶ್ನೆ ನನಗೆ ಮೂಡಿದೆ ಅಂತಾ ಲೋಕಸಭೆ ಉಪಚುನಾವಣೆ ಬಗ್ಗೆ ಶಾಸಕ ಸಿ.ಟಿ.ರವಿ ಅಸಮಾಧಾನ ಹೊರಹಾಕಿದ್ದಾರೆ. 

ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಶಾಸಕ ಸಿ.ಟಿ.ರವಿ, ಎಲ್ಲ ಪಕ್ಷದವರಿಗೆ ಕೇಳಿದ್ರೆ ಯಾವ ಪಾರ್ಟಿಯ ಮುಖಂಡರಿಗೂ ಒಳಗೆ ಕೇಳಿದ್ರೆ ಚುನಾವಣೆ ಬೇಡ, ಆದ್ರೆ ಹೊರಗೆ ಚುನಾವಣೆ ಪ್ರತಿಷ್ಠೆ ಇದೆ ಅಷ್ಟೇ. ನಾವು ಉಪಚುನಾವಣೆಯನ್ನ ಎದುರಿಸೋಕೆ ಸಿದ್ದರಾಗಿದ್ದು, ಎಲ್ಲಾ ರೀತಿಯ ಸಿದ್ಧತೆಯನ್ನ ನಾವು ಮಾಡಿಕೊಳ್ಳುತ್ತಿದ್ದೇವೆ ಎಂದರು.

ಲೋಕಸಭೆ ಉಪಚುನಾವಣೆ ಬೇಕಿತ್ತಾ ಅನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ. ಹಾಗೇ ನನಗೂ ಕೂಡ ಪ್ರಶ್ನೆ ಮೂಡಿದೆ ಎಂದರು. ಬಿಜೆಪಿ ಪಕ್ಷ ಯಾವ ಚುನಾವಣೆಯನ್ನು ಕೂಡ ಹಗುರವಾಗಿ ತೆಗೆದುಕೊಳ್ಳುವುದಿಲ್ಲ, ಈ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಐದು ಕ್ಷೇತ್ರಗಳಲ್ಲಿ ಗೆಲ್ಲೋಕೆ ನಮ್ಮ ಪ್ರಯತ್ನ ನಡೆಯುತ್ತಿದ್ದು ಐದಕ್ಕೆ ಐದು ಕ್ಷೇತ್ರದಲ್ಲೂ ಗೆಲ್ಲುವ ಪ್ರಯತ್ನ ನಮ್ಮದು ಎಂದರು.




Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಶಾಸಕ ಪಿ. ರಾಜೀವ್ ಗೆ ಬಂಧನ ಭೀತಿ !