Select Your Language

Notifications

webdunia
webdunia
webdunia
webdunia

ರು.17 ಕೋಟಿ ವೆಚ್ಚದ ಕರ್ನಾಟಕ ಮಾಹಿತಿ ಆಯೋಗ ಕಟ್ಟಡ

ರು.17 ಕೋಟಿ ವೆಚ್ಚದ ಕರ್ನಾಟಕ ಮಾಹಿತಿ ಆಯೋಗ ಕಟ್ಟಡ
Bangalore , ಮಂಗಳವಾರ, 31 ಜನವರಿ 2017 (13:31 IST)
ಸರ್ಕಾರದ ಸಚಿವರುಗಳು, ಅಧಿಕಾರಿಗಳು ಮತ್ತು ಇತರೆ ಸಾರ್ವಜನಿಕ ಉದ್ಯಮಿಗಳಿಂದ ಮಾಹಿತಿ ಪಡೆದುಕೊಳ್ಳುವುದು ಅವಶ್ಯಕತೆಗೆ ಅನುಗುಣವಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಪಡೆದುಕೊಳ್ಳಬೇಕೇ ಹೊರತು ಅದನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಪಡೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
 
ಮಾಹಿತಿ ಸೌಧದ ನೂತನ ಕಟ್ಟಡ ಉದ್ಫಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಭಾರತ ದೇಶದಲ್ಲಿ ಕರ್ನಾಟಕ ಮಾಹಿತಿ ಆಯೋಗ ಮಾತ್ರ ಸ್ವಂತ ಕಟ್ಟಡ ಹೊಂದಿದೆ. ಈ ಕಟ್ಟಡದ ಕಾಮಗಾರಿಗಾಗಿ ಸುಮಾರು 17 ಕೋಟಿ ರೂ. ವೆಚ್ಚಮಾಡಲಾಗಿದೆ ಎಂದರು.
 
ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂದು ಎಲ್ಲರಿಗೂ ಗೊತ್ತಾಗಬೇಕು ಎಂಬ ಕಾಯ್ದೆ ಅಗತ್ಯವಿತ್ತು. ಆದ್ದರಿಂದ ಈ ಮಾಹಿತಿ ಆಯೋಗವು ಜಾರಿಗೆ ಬಂದಿದೆ. ಮಾಹಿತಿ ದೇಶದ ಜನತೆಯ ಬದುಕಿಗೆ ಸಂಬಂಧಪಟ್ಟಿದ್ದು. ಯಾವುದೇ ರೀತಿಯಲ್ಲಿ ಸರ್ಕಾರದ ಹಣ ದುರುಪಯೋಗವಾಗಬಾರದು ಎಂದರು.
 
ಕಾನೂನು ಸಂಸದೀಯ ವ್ಯವಹಾರ ಮತ್ತು ಸಣ್ಣ ನೀರಾವರಿ ಸಚಿವ ಟಿ.ಬಿ. ಜಯಚಂದ್ರ ಅವರು ಆಡಳಿತದಲ್ಲಿನ ಲೋಪದೋಷವನ್ನು ಎತ್ತಿಹಿಡಿದು ಜನರಿಗೆ ಪಾರದರ್ಶಕವಾದ ಮಾಹಿತಿಯನ್ನು ನೀಡುವುದು ಬಹಳ ಮುಖ್ಯ. ಆದ್ದರಿಂದ ಭವ್ಯ, ಸುಂದರವಾದ ಮಾಹಿತಿಸೌಧವನ್ನು ದೇಶದಲ್ಲೇ ಕರ್ನಾಟಕದ ರಾಜಧಾನಿಯಲ್ಲೇ ನಮ್ಮ ಸರ್ಕಾರ ಮಾಹಿತಿ ಸೌಧವನ್ನು ನಿರ್ಮಿಸಿದೆ ಎಂದು ತಿಳಿಸಿದರು.
 
ಈ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಹಾಗೂ ಬಂದರು, ಒಳನಾಡು, ಜಲಸಾರಿಗೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಬೆಂಗಳೂರು ಮಹಾನಗರಪಾಲಿಕೆಯ ಮಹಾಪೌರರಾದ ಶ್ರೀಮತಿ ಜಿ. ಪದ್ಮಾವತಿ, ಕೇಂದ್ರ ಮಾಹಿತಿ ಆಯೋಗದ ಆಯುಕ್ತ ಶ್ರೀಧರ ಆಚಾರ್ಯ, ರಾಜ್ಯದ ಮುಖ್ಯ ಮಾಹಿತಿ ಆಯುಕ್ತ ಕೃಷ್ಣಕುಮಾರ್ ಮತ್ತು ಇತರೆ ಹಿರಿಯ ಮಾಹಿತಿ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಧ ಬೆಲೆಗೆ ಪೌಷ್ಠಿಕಾಂಶ ಇರುವ ತೊಗರಿ ಬೇಳೆ