Select Your Language

Notifications

webdunia
webdunia
webdunia
webdunia

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದವರನ್ನು ಒಂದು ಮಾಡಿದ ನ್ಯಾಯಧೀಶರು

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದವರನ್ನು ಒಂದು ಮಾಡಿದ ನ್ಯಾಯಧೀಶರು
ಬೆಂಗಳೂರು , ಸೋಮವಾರ, 13 ಆಗಸ್ಟ್ 2018 (09:44 IST)
ಬೆಂಗಳೂರು: ಹುಬ್ಬಳ್ಳಿಯಲ್ಲಿ ನಗರದ ನೂತನ ತಾಲೂಕು ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೆ ಬಂದಿದ್ದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕರ್ ಮಿಶ್ರಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಯನ್ನು ಒಂದು ಮಾಡಿದ್ದಾರೆ.
 
ನ್ಯಾಯಾಲಯದಲ್ಲಿ ಏರ್ಪಡಿಸಿದ್ದ ವಿಶೇಷ ಲೋಕ ಅದಾಲತ್ ನಲ್ಲಿ ವಿಚ್ಛೇನದ ಬಯಸಿ ಅರ್ಜಿ ಸಲ್ಲಿಸಿದ್ದ ಜಗದೀಶ ಶೆಳಗಿ ಮತ್ತು ಪಾರ್ವತಿ ದಂಪತಿಯನ್ನು ಮಾತುಕತೆ ಮೂಲಕ ತಿಳಿಹೇಳಿ ನ್ಯಾಯಾಧೀಶರು ಪ್ರಕರಣ ಹಿಂಪಡೆದು ಮತ್ತೆ ಒಂದಾಗಿ ಬಾಳುವಂತೆ ಮಾಡಿದ್ದಾರೆ.

ಈ ದಂಪತಿಗೆ ನಾಲ್ವರಿ ಮಕ್ಕಳೂ ಇದ್ದರು. ಈ ವಿಚಾರಣೆ ಸಂದರ್ಭ ನ್ಯಾ. ದೀಪಕ್ ಮಿಶ್ರಾ ನಾಲ್ವರು ಮಕ್ಕಳನ್ನೂ ಕರೆಸಿ ದಂಪತಿಗೆ ಬುದ್ಧಿ ಹೇಳಿ ಒಂದಾಗಿ ಬಾಳಲು ಸಲಹೆ ಮಾಡಿದರು. ನ್ಯಾಯಾಧೀಶರ ಸಲಹೆಯಂತೆ ದಂಪತಿ ವಿಚ್ಛೇದನ ಪ್ರಕರಣ ಹಿಂಪಡೆದು ಮತ್ತೆ ಒಂದಾಗಿ ಬಾಳಲು ಒಪ್ಪಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಮಾಜಿ ಸ್ಪೀಕರ್ ಸೋಮನಾಥ ಚಾಟರ್ಜಿ ನಿಧನ