Select Your Language

Notifications

webdunia
webdunia
webdunia
webdunia

ನಾವು ಹಿಂದೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇ ದೊಡ್ಡ ತಪ್ಪು-ದಿನೇಶ್ ಗುಂಡೂರಾವ್

ನಾವು ಹಿಂದೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇ ದೊಡ್ಡ ತಪ್ಪು-ದಿನೇಶ್ ಗುಂಡೂರಾವ್
bangalore , ಶುಕ್ರವಾರ, 8 ಸೆಪ್ಟಂಬರ್ 2023 (21:03 IST)
ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರವಾಗಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.ಮೈತ್ರಿ ಬಗ್ಗೆ ಅಧಿಕೃತ ವಾಗಿ ಬಿಜೆಪಿ ಅಧ್ಯಕ್ಷ ಕಟೀಲ್, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹೇಳಿಕೆ ನೀಡಿಲ್ಲರಾಜಕೀಯವಾಗಿ ಅವರವರ ನಿಲುವುಗಳು ಅವರಿಗೆ ಬಿಟ್ಟಿದ್ದು. 
ನಮ್ಮದೇನೂ ತಕರಾರಿಲ್ಲಮಕಾಂಗ್ರೆಸ್ ಬಹಳ ಬಲಿಷ್ಟವಾಗಿದೆ ಎನ್ನೋದು ಇದರಲಿ ಎದ್ದು ಕಾಣುತ್ತಿದೆ. ನಮ್ಮ ಕಾರ್ಯಕ್ರಮ ಅನುಷ್ಟಾನದ ಆದಾರದ ಮೇಲೆ ನಾವು ಚುನಾವಣೆಗೆ ಹೋಗ್ತೇವೆ.ಮುಂದೆ ಏನೇನು ತೀರ್ಮಾನಗಳಾಗುತ್ತದೆಯೋ ಗೊತ್ತಿಲ್ಲ.20 ಸೀಟುಗಿಂತ ನಾವು ಹೆಚ್ಚು ಗೆದ್ದೇ ಗೆಲ್ತೇವೆ.ಜೆಡಿಎಸ್ ಹಿಂದೆಯೂ ಕೂಡ ಬಿಜೆಪಿ ಜೊತೆಗೆ ಸರ್ಕಾರ ಮಾಡಿದೆ.ಜಾತ್ಯಾತೀತ ಸಿದ್ದಾಂತಕ್ಕೆ ಕಟಿಬದ್ದರಾಗಿಯೇನೂ ಜೆಡಿಎಸ್ ಇಲ್ಲ.ಅನುಕೂಲ ಸಿಂಧೂ ರಾಜಕಾರಣ ಮಾಡುವುದಕ್ಕೆ ಹೊರಟಿದ್ದಾರೆ.ತತ್ವ ರಹಿತ ರಾಜಕಾರಣ ಜೆಡಿಎಸ್ ನದ್ದು.ಬಿಜೆಪಿಯವರ ಫಲಿತಾಂಶ ಕೂಡ ಮೋದಿ ಠಿಕಾಣಿ ಹೂಡಿದರೂ ಶೂನ್ಯ ಆಯ್ತು.ಪಾರ್ಲಿಮೆಂಟ್ ಸದಸ್ಯರೇ ಚುನಾವಣೆಗೆ ಈ ಬಾರಿ ನಿಲ್ಲಲು ಹಿಂದೇಟು ಹಾಕ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ.
 
ಇನ್ನೂ ನಾವು ಹಿಂದೆ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇ ದೊಡ್ಡ ತಪ್ಪು, ದೊಡ್ಡ ಸಮಸ್ಯೆ ಆಗಿತ್ತು.ಹೀಗಾಗಿ ನಾವು ಇವತ್ತು ಮುಕ್ತವಾಗಿದ್ದೇವೆ.ನಮ್ಮ ಸ್ಟ್ರಾಟಜಿ ನಾವು ಮಾಡ್ತೇವೆ.ಅವರು ತಮ್ಮ ಪ್ರಯತ್ನ ಮಾಡಲಿ, ಆದರೆ ಜನ ನಮ್ಮ ಜೊತೆಗೆ ಇದ್ದಾರೆ.ಆಡಳಿತ ಕೂಡ ಸುಧಾರಣೆ ಮಾಡಿ ಪರಿಣಾಮಕಾರಿ ಕೆಲಸ ನಾವು ಮಾಡ್ತಾ ಇದ್ದೇವೆ.ರಾಷ್ಟ್ರೀಯ ಚುನಾವಣೆ ಬಂದರೆ ಬೇರೆ ತರಹ ಓಟು ಮಾಡ್ತಾರೆ ಎನ್ನೋದು ಈಗ ಇಲ್ಲ.ಬರೀ ಭಾಷಣ ಮಾಡ್ತಾರೆ ಇವರು ಎನ್ನೋದು ಜನರಿಗೂ ಅರ್ಥವಾಗಿದೆ.ರಾಷ್ಟ್ರ ಮಟ್ಟದಲ್ಲಿ ಏನೇನೋ ವಿಷಯಾಂತರ ಮಾಡುವ ಪ್ರಯತ್ನ ಮಾಡ್ತಿದ್ದಾರೆ.ಸನಾತನ ಧರ್ಮದ ಬಗ್ಗೆ ತಕ್ಷಣಕ್ಕೆ ರಿಯಾಕ್ಟ್ ಮಾಡ್ತಾರೆ.ಯಾವುದು ಅಗತ್ಯವಿದೆ ಎನ್ನುವ ವಿಷಯ ಬಗ್ಗೆ ಅವರು ಬಾಯೇ ಬಿಡೋದಿಲ್ಲ.ರಾಜ್ಯದಲ್ಲಿ ಸೋಲಿನ ಬಳಿಕ ಬಿಜೆಪಿ ದಿಗ್ಭ್ರಮೆಯಲ್ಲಿದ್ದಾರೆ.ಯಾರ ಮಾತು ಕೇಳಬೇಕು ಎನ್ನೋದು ಬಿಜೆಪಿ ನಾಯಕರಿಗೇ ಗೊತ್ತಾಗ್ತಾ ಇಲ್ಲ.ಬಿಜೆಪಿ ಯಲ್ಲಿ ಜೆಡಿಎಸ್ ನಲ್ಲಿ ಎಷ್ಟು ಜನ ಉಳಿತಾರೋ ಗೊತ್ತಿಲ್ಲ.ಅವರನ್ನು ಉಳಿಸಿಕೊಳ್ಳಲು ಯಡಿಯೂರಪ್ಪ ರೇವಣ್ಣ ಹೇಳಿಕೆ ಕೊಡ್ತಿರಬಹುದು.ಬಿಜೆಪಿ ಜೆಡಿಎಸ್ ನವರು ದಿಕ್ಕಾಪಾಲಾಗಿದ್ದಾರೆ.ಮೈತ್ರಿಯಿಂದ ನಮಗೆ ಸವಾಲೇನೂ ಇಲ್ಲ.20 ಕ್ಕೂ ಹೆಚ್ಚು ಸೀಟು ನಾವು ಗೆಲ್ಲುವುದಕ್ಕೆ ಕಾಂಗ್ರೆಸ್ ಗೆ ಹೆಚ್ಚು ಅನುಕೂಲ ಆಗುವ ಸಾಧ್ಯತೆಯೇ ಇದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ರು.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಇಂದಿನಿಂದ 5 ದಿನಗಳ ಕಾಲ ಮತ್ತೆ ಮಳೆ!