Select Your Language

Notifications

webdunia
webdunia
webdunia
webdunia

ನನಗೆ ನ್ಯಾಯ ದೊರೆಯದಿದ್ದರೆ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಲಾಗುವುದು- ನಟ ಚೇತನ್ ಆಕ್ರೋಶ

ನನಗೆ ನ್ಯಾಯ ದೊರೆಯದಿದ್ದರೆ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಲಾಗುವುದು- ನಟ ಚೇತನ್ ಆಕ್ರೋಶ
ಬೆಂಗಳೂರು , ಮಂಗಳವಾರ, 22 ಮೇ 2018 (09:05 IST)
ಬೆಂಗಳೂರು : ನಾಡಿನ ಆದಿವಾಸಿಗಳ ಪರ ಹೋರಾಟ ನಡೆಸಿದ ಸ್ಯಾಂಡಲ್ ವುಡ್ ನಟ ಚೇತನ್ ಅವರು ಇದೀಗ ತಮಗೆ ನಕ್ಸಲೈಟ್ ಹಾಗೂ ದೇಶ ವಿರೋಧಿ ಪಟ್ಟ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು,’ ಹಿಂದಿನ ಸ್ಪೀಕರ್ ಕೆ.ಜಿ. ಬೋಪಯ್ಯ ಅವರು ನನ್ನನ್ನು ದೇಶ ವಿರೋಧಿ ಹಾಗೂ ನಕ್ಸ್‌ಲೈಟ್ ಎಂದು ಟೀಕಿಸಿದ್ದರು. ಅಂದು ನಡೆದ  ಹೋರಾಟ ನಕ್ಸಲ್ ಪ್ರೇರಿತ, ಅಲ್ಲದೇ ನನ್ನನ್ನು ನಕ್ಸಲ್ ಪರವಾದ ವ್ಯಕ್ತಿ ಎಂದು ಚಾರ್ಜ್‌ಶೀಟ್‍ನಲ್ಲಿ ಉಲ್ಲೇಖಿಸಿಲಾಗಿದೆ. ಚಾರ್ಜ್‍ಶೀಟ್‍ನಲ್ಲಿ ಈ ಅಂಶವನ್ನು ತೆಗೆಯುವಂತೆ ಬಿ.ಎಸ್‌.ಯಡಿಯೂರಪ್ಪ ಹಾಗೂ ಡಿ.ವಿ.ಸದಾನಂದಗೌಡರಿಗೆ ಮನವಿ ಸಲ್ಲಿಸಿದ್ದೇನೆ. ನನಗೆ ನ್ಯಾಯ ದೊರೆಯದಿದ್ದರೆ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.


ಹಾಗೇ ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮ ಗುಡ್ಡದಲ್ಲಿ ಇನ್ನೂ ದೇವದಾಸಿ ಪದ್ಧತಿ ಜಾರಿಯಲ್ಲಿದೆ. ಈ ಅನಿಷ್ಠ ಪದ್ಧತಿಯನ್ನು ಬೇರು ಸಮೇತ ಕಿತ್ತೊಗೆಯುವ ಅವಶ್ಯಕತೆ ಇದೆ. ಇದರ ನಿರ್ಮೂಲನೆಗಾಗಿ ಸವದತ್ತಿಯಲ್ಲಿ ಜನಜಾಗೃತಿ ಮೂಡಿಸಲಾಗುವುದು. ಜೊತೆಗೆ ರಾಜ್ಯ ಸರ್ಕಾರ ಈ ವಿಚಾರದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಬಗ್ಗೆ ನಟ ಉಪೇಂದ್ರರವರ ಅಭಿಪ್ರಾಯವೇನು? ಇಲ್ಲಿದೆ ನೋಡಿ ವಿವರ