Select Your Language

Notifications

webdunia
webdunia
webdunia
webdunia

ನಾನು ಸಾವಿನ ವೈಟಿಂಗ್ ಲಿಸ್ಟ್ ನಲ್ಲಿದ್ದೇನೆ-ರಮೇಶ್ ಕುಮಾರ್

ನಾನು ಸಾವಿನ ವೈಟಿಂಗ್ ಲಿಸ್ಟ್ ನಲ್ಲಿದ್ದೇನೆ-ರಮೇಶ್ ಕುಮಾರ್
ಚಿಕ್ಕಬಳ್ಳಾಪುರ , ಶುಕ್ರವಾರ, 4 ಜನವರಿ 2019 (07:50 IST)
ಚಿಕ್ಕಬಳ್ಳಾಪುರ: , ನನಗೀಗ 70 ವರ್ಷ ವಯಸ್ಸಾಗಿದೆ, 10 ಎಲೆಕ್ಷನ್ ಮಾಡಿದ್ದೇನೆ. ನನ್ನ ಸಾವು ಯಾವಾಗ ಹೇಗೆ ಅಂತ ಗೊತ್ತಿಲ್ಲ, ನಾನು ಸಾವಿನ ವೈಟಿಂಗ್ ಲಿಸ್ಟ್ ನಲ್ಲಿದ್ದೇನೆ ನನ್ನ ತಿಥಿಗೆ ನಾನ್ ವೆಜ್ ಊಟ ಹಾಕಸರಪ್ಪ ಎಂದು ಸ್ಪೀಕರ್ ರಮೇಶ್ ಕುಮಾರ್ ನಗೆ ಚಟಾಕಿಯೊಂದನ್ನು ತೇಲಿಸಿಬಿಟ್ಟಿದ್ದಾರೆ.


ಅವಿಭಜಿತ ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಹಾಗೂ ಕ್ಷೀರ ಕ್ರಾಂತಿಯ ಹರಿಕಾರರಾಗಿದ್ದ ದಿವಂಗತ ಎಂ ವಿ ಕೃಷ್ಣಪ್ಪ ನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆಚರಿಸಿಲು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ರಮೇಶ್ ಕುಮಾರ್ ಭಾಗಿಯಾಗಿದ್ದರು



ನಮ್ಮ ಮನೆಯಲ್ಲಿ ತಿಥಿ ಮಾಡಿದರೆ ನಮ್ಮವರು 14-15 ಜನ ಸೇರುತ್ತಾರೆ. ಪಾಯಸ ವಡೆ ಹಾಕಿ ತಿಥಿ ಹೊಟ್ಟೆ ತುಂಬ ತಿಂದು ಕಾರ್ಯ ಮುಗಿಸಿಬಿಡುತ್ತಾರೆ. ಆದರೆ ನಾನು ಎರಡು ಊಟ ಮಾಡುವವನು. ಹಾಗಾಗಿ ನನಗೆ ಆ ಊಟನೂ ಹಾಕಬೇಕಲ್ಲಪ್ಪ, ನಮ್ಮ ಮನೆಯಲ್ಲಿ ಆ ಊಟ ಹಾಕಲಿಲ್ಲ ಆಂದರೆ ನೀವಾದ್ರೂ ಹಾಕಿಸಿ ಎಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆ ಸಭಾಧ್ಯಕ್ಷ ರಮೇಶ್ ಕುಮಾರ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



Share this Story:

Follow Webdunia kannada

ಮುಂದಿನ ಸುದ್ದಿ

ಮಾಂಸಾಹಾರ ಸೇವಿಸಿ ಶಬರಿಮಲೆ ಪ್ರವೇಶಿಸಿದ ಬಿಂದು ಹಾಗೂ ಕನಕದುರ್ಗಾ!