Select Your Language

Notifications

webdunia
webdunia
webdunia
webdunia

ಜಿಯೋ‌ ಸಂಸ್ಥೆಯ ಅಕ್ರಮ ಮುಚ್ಚಿಟ್ಟ ಪ್ರಕರಣ ಬಿಬಿಎಂಪಿ ಅಧಿಕಾರಿಗಳ ಮೇಲೆ FIR ದಾಖಲು

ಜಿಯೋ‌ ಸಂಸ್ಥೆಯ ಅಕ್ರಮ ಮುಚ್ಚಿಟ್ಟ ಪ್ರಕರಣ ಬಿಬಿಎಂಪಿ  ಅಧಿಕಾರಿಗಳ ಮೇಲೆ FIR ದಾಖಲು
bangalore , ಶನಿವಾರ, 1 ಜುಲೈ 2023 (21:35 IST)
ಜಿಯೋ‌ ಸಂಸ್ಥೆಯ ಅಕ್ರಮ ಮುಚ್ಚಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ‌, ಬಿಡಬ್ಲೂಎಸ್‌ಎಸ್‌ಬಿ‌ ಅಧಿಕಾರಗಳ ಮೇಲೆ FIR ದಾಖಲಾಗಿದೆ.ಐಪಿಸಿ ಸೆಕ್ಸನ್ 217ಮತ್ತು 409ಅಡಿ ಪುಟ್ಟೇನ‌ ಹಳ್ಲಿ ಪೋಲಿಸ್ ಠಾಣೆಯಲ್ಲಿ FIR ದಾಖಲಾಗಿದೆ.ಅಕ್ರಮವಾಗಿ ಒಎಫ್‌ಸಿ ಕೇಬಲ ಅಳವಡಿಸಿರುವ ಜಿಯೋ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆ FIR ದಾಖಲಾಗಿದೆ.
 
ಬೆಂಗಳೂರು ನಗರ ಅರೆಕೆರೆ ಬ್ರಿಗೇಡ್ ಮಿಲೇನಿಯಂ‌ ಮುಖ್ಯರಸ್ಥೆ ಗಳಲ್ಲಿ‌ ಈ ಹಿಂದೆ ಜಿಯೋ ಕೇಬಲ್ ಅಳವಡಿಕೆ‌ ಮಾಡಲಾಗಿತ್ತು.ಜಿಯೋ ಡಿಜಿಟಲ್ ಪೈಬರ್ ಪ್ರೈವೇಟ್ ಲಿಮಿಟೆಡ್‌ ಕಂಪನಿ ಬಿಬಿಎಂಪಿಯಿಂದ ಯಾವುದೇ ಅನುಮತಿ ಪಡೆಯದೇ ಕೇಬಲ್ ಅಳಮಾಡಿಕೆ ಮಾಡಿದೆ.ಅನುಮತಿ ಪಡೆಯದೇ ಯಾವುದೇ ತೆರಿಗೆ ಪಾವತಿಸದೇ ಕೇಬಲ್ ಅಳವಡಿಸಲಾಗಿದೆ.ಇದರಿಂದ  ಸರ್ಕಾರಕ್ಕೆ ನಷ್ಟವಾಗಿದೆ.ಬಿಬಿಎಂಪಿ ಮತ್ತು ಬಿಡಬ್ಲೂಎಸ್‌ಎಸ್‌ಬಿ ಅಧಿಕಾರಿಗಳು ಜಿಯೋ ಕಂಪನಿಯ ಕೃತ್ಯವನ್ನ ಮುಚ್ಚಿಹಾಕಿದ್ದಾರೆಮಸ್ಥಳೀಯರು ಸಾಕಷ್ಟು ಬಾರಿ ಬಿಬಿಎಂಪಿಗೆ ಈ ಸಂಭಂದ ದೂರನ್ನ‌ ಕೊಟ್ಟಿದ್ದರು.ಆದರೂ ಅಧಿಕಾರಿಗಳು ಕ್ರಮ‌ಕೈಗೊಳ್ಳ ಹಿನ್ನೆಲೆ ಸ್ಥಳೀಯರು ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ.
 
FIR Registered against BBMP and BWSSB Officials.ಜಿಯೋ ಸಂಸ್ಥೆಯ ಅಕ್ರಮ ಮುಚ್ಚಿಟ್ಟ ಸಂಬಂಧ ಪ್ರಕಾಶ್, AEE (BBMP), Arekere Subdivision ಮತ್ತು ವಿನಾಯಕ್ ನಾಯಕ್ AEE (BWSSB), Bangalore South 2 Subdivision, ಇಬ್ಬರ ಮೇಲೂ ಐ.ಪಿ.ಸಿ ಕಲಂ 217 ಹಾಗೂ 409'ರ ಅಡಿ ಪುಟ್ಟೇನಹಳ್ಳಿ ಪೋಲಿಸ್ ಠಾಣೆಯಲ್ಲಿ FIR ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನ್ನ ಭಾಗ್ಯ ಸೇರಿ ಹಲವು ಬೇಡಿಕೆಗೆ ರೈತರ ಆಗ್ರಹ