Select Your Language

Notifications

webdunia
webdunia
webdunia
webdunia

ರಸ್ತೆಗೆ ಲಿಂಬೆಹಣ್ಣು ಸುರಿದು ಆಕ್ರೊಶ ವ್ಯಕ್ತಪಡಿಸಿದ ರೈತರು

ರಸ್ತೆಗೆ ಲಿಂಬೆಹಣ್ಣು ಸುರಿದು ಆಕ್ರೊಶ ವ್ಯಕ್ತಪಡಿಸಿದ ರೈತರು
ವಿಜಯಪುರ , ಬುಧವಾರ, 25 ಜುಲೈ 2018 (19:16 IST)
ಲಿಂಬೆ ಬೆಳೆಗಾರರು ತಾವು ಬೆಳೆದ ಲಿಂಬೆಯನ್ನ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದಾರೆ. ಲಾರಿ ಮಾಲೀಕರ ಮುಷ್ಕರದಿಂದಾಗಿ ಸಂಕಷ್ಟಕ್ಕೀಡಾದ ಲಿಂಬೆ ಬೆಳೆಗಾರರು ರಸ್ತೆಯಲ್ಲಿ ಸಂಪೂರ್ಣವಾಗಿ ವಾಣಿಜ್ಯವಾಹನಗಳನ್ನು ತಡೆದು ಮುಷ್ಕರ ಮಾಡಿದ್ದಾರೆ.

ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಇಂದು ಲಿಂಬೆ ಬೆಳೆಗಾರರು ತಾವು ಬೆಳೆದ ಲಿಂಬೆಯನ್ನ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದಾರೆ. ಲಾರಿ ಮಾಲೀಕರ ಮುಷ್ಕರದಿಂದಾಗಿ ಸಂಕಷ್ಟಕ್ಕೀಡಾದ ಲಿಂಬೆ ಬೆಳೆಗಾರರು ಇಂಡಿಯಿಂದ  ಸೊಲ್ಲಾಪುರಕ್ಕೆ ಹೊಗುವ ಮಾರ್ಗದಲ್ಲಿ ಸಂಪೂರ್ಣವಾಗಿ ವಾಣಿಜ್ಯವಾಹನಗಳನ್ನು ತಡೆದು ಮುಷ್ಕರ ಮಾಡಿದರು.

ಇಂಡಿ ತಾಲೂಕ ಲಾರಿ ಮಾಲಿಕರ ಸಂಘಟಕರಿಂದ ಇಂದು ಇಂಡಿಯಲ್ಲಿ ವಾಣಿಜ್ಯ ವಾಹನಗಳನ್ನು ತಡೆದು ಸಂಪೂರ್ಣವಾಗಿ ಮುಷ್ಕರ ಕ್ಕೆ ಬೆಂಬಲ ಸೂಚಿಸಿದರು.

ಅನ್ನದಾತ ಇಡಿ ವರ್ಷವೆಲ್ಲಾ ಶ್ರಮ ವಹಿಸಿ ಬೆಳೆದ ನಿಂಬೆಹಣ್ಣು ರಸ್ತೆ ಮೇಲೆ ಚೆಲ್ಲಿ ಅಕ್ರೋಷ ವ್ಯಕ್ತ ಪಡಿಸಿದರು. ಬರದ ನಾಡಲ್ಲಿ ನೀರು ಖರೀದಿಸಿ ತನ್ನ ನಿಂಬೆ ಬೆಳೆಗೆ ನೀರು ಹಾಕಿ ಅನ್ನದಾತ ಬೆಳೆದ ಬೆಳೆಗೆ ಬೆಲೆಯಿಲ್ಲ ಎಂದು ನೋವಿನ ಕಣ್ಣಿರು ಸುರಿಸುತ್ತಿದ್ದಾನೆ ಅನ್ನದಾತ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ ಅವೈಜ್ಞಾನಿಕ ತೆರಿಗೆ ಪದ್ದತಿಯಿಂದ ಅನ್ನದಾತ ಮತ್ತು ಲಾರಿ ಮಾಲಕನ ಮಧ್ಯ ಜೊರಾದ ಜಗಳಕ್ಕೆ ನಾಂದಿಯಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಯಾವುದೇ ಸೌಲಭ್ಯವಿಲ್ಲ: ಆದರೂ 12 ವರ್ಷಗಳಿಂದ ಆ ಸಿಬ್ಬಂದಿ ಕಾಯುತ್ತಿರುವುದೇನು ಗೊತ್ತಾ?