Select Your Language

Notifications

webdunia
webdunia
webdunia
webdunia

ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿದ ಮಾಜಿ ಸಚಿವ ಡಾ. ಸಿಎನ್ ಅಶ್ವತ್ಥನಾರಾಯಣ್

BJP

Krishnaveni K

ಬೆಂಗಳೂರು , ಶುಕ್ರವಾರ, 12 ಏಪ್ರಿಲ್ 2024 (13:43 IST)
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಿದ್ದಾಗ ಹಲ್ಲೆಗೊಳಗಾಗಿದ್ದ ಬಿಜೆಪಿ ಕಾರ್ಯಕರ್ತರನ್ನು ಇಂದು ಮಾಜಿ ಸಚಿವ ಡಾ. ಸಿಎನ್ ಅಶ್ವತ್ಥನಾರಾಯಣ್ ಭೇಟಿ ಮಾಡಿದ್ದಾರೆ.

ಕುಣಿಗಲ್ ನಲ್ಲಿ ನಿನ್ನೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಘಟನೆಯನ್ನು ಖಂಡಿಸಿದ್ದ ಬಿಜೆಪಿ ಇದೆಲ್ಲಾ ಕಾಂಗ್ರೆಸ್ ನವರ ಕೃತ್ಯ ಎಂದು ಆರೋಪಿಸಿತ್ತು. ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಕಾರ್ಯಕರ್ತರನ್ನು ಭೇಟಿ ಮಾಡಿದ ಅಶ್ವತ್ಥನಾರಾಯಣ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ.

ಬಳಿಕ ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ‘ಸಾರ್ವಜನಿಕರು ಕಾರ್ಯಕರ್ತರು ಯಾರೂ ಹೆದದರಬೇಕಿಲ್ಲ. ನಿಮ್ಮನ್ನು ಸುರಕ್ಷಿತವಾಗಿರಿಸಲು ನಾವು ಯಾವತ್ತೂ ನಿಮ್ಮ ಜೊತೆಗಿರುತ್ತೇವೆ. ಚಾಕು ತಂದು ಚುಚ್ಚಿರುವುದು ಕ್ಯಾಮರಾದಲ್ಲೇ ಗೊತ್ತಾಗುತ್ತಿದೆ. ಆದರೆ ಬೆದರಿಕೆ ಎಂದು ಸಣ್ಣ ಕೇಸ್ ಹಾಕಿದ್ದಾರೆ. ಕಣ್ಮುಂದೇ ಸಾಕ್ಷಿಯಿದ್ದರೂ ಸರಿಯಾದ ಕ್ರಮ ಕೈಗೊಳ‍್ಳಲು ಪೊಲೀಸರು ವಿಫಲರಾಗಿದ್ದಾರೆ. ಪೊಲೀಸರು ಕಾಂಗ್ರೆಸ್ ನ ಕೈಗೊಂಬೆಯಾಗಿದ್ದಾರೆ’ ಎಂದಿದ್ದಾರೆ.

‘ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವುದು, ತಡೆಯುವುದು, ಅಧಿಕಾರ ದುರ್ಬಳಕೆ ಮಾಡುವುದು ಎಲ್ಲವನ್ನೂ ಕಾಂಗ್ರೆಸ್ ಮಾಡುತ್ತಿದೆ. ಸಂತ್ರಸ್ತರು ಕಂಪ್ಲೇಂಟ್ ಕೊಡಲೂ ಹಿಂದೇಟು ಹಾಕುವಂತಹ ಪರಿಸ್ಥಿತಿಯಾಗಿದೆ. ನೆಪ ಮಾತ್ರಕ್ಕೆ ಕಂಪ್ಲೇಂಟ್ ಹಾಕಿ ಆರೋಪಿಗಳಿಗೆ ಕುಮ್ಮಕ್ಕು ಕೊಡಲಾಗುತ್ತಿದೆ. ಅಧಿಕಾರಿಗಳು ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ದೂರು ಕೊಡಲಿದ್ದೇವೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ: ಮಾಸ್ಟರ್ ಮೈಂಡ್ ವಶಕ್ಕೆ