Select Your Language

Notifications

webdunia
webdunia
webdunia
webdunia

ಪೋಷಕರು ಇಲ್ಲದ ವೇಳೆ ಇಬ್ಬರು ಬಾಲಕಿಯರಿಗೆ ಬಾಲಕನೊಬ್ಬ ಮಾಡಿದ್ದೇನು ಗೊತ್ತಾ?

ಪೋಷಕರು ಇಲ್ಲದ ವೇಳೆ ಇಬ್ಬರು ಬಾಲಕಿಯರಿಗೆ ಬಾಲಕನೊಬ್ಬ ಮಾಡಿದ್ದೇನು ಗೊತ್ತಾ?
ಮಂಡ್ಯ , ಶುಕ್ರವಾರ, 28 ಸೆಪ್ಟಂಬರ್ 2018 (08:41 IST)
ಮಂಡ್ಯ : ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಇಬ್ಬರು ಬಾಲಕಿಯರ ಮೇಲೆ ಬಾಲಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.


ಬಾಲಕಿಯರ ತಂದೆ ತಾಯಿಗಳು ವ್ಯಾಪಾರ ಮಾಡಲು ಬೇರೆ ಗ್ರಾಮಗಳಿಗೆ ತೆರಳುತ್ತಿದ್ದರು. ಆ ವೇಳೆ  ಬಾಲಕಿಯರು ಶಾಲೆಯಿಂದ ಮನೆಗೆ ಬಂದಾಗ ಆರೋಪಿ ಆ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾನೆ. ಈ ವಿಚಾರ ತಿಳಿದ ಬಾಲಕಿಯರ ಪೋಷಕರು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


ದೂರಿನ ಮೇರೆಗೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಪೊಕ್ಸೋ ಕಾಯ್ದೆಯಡಿ ಬಂಧಿಸಿ ಬಾಲಮಂದಿರದ ವಶಕ್ಕೆ ಒಪ್ಪಿಸಿದ್ದಾರೆ. ಸಂತ್ರಸ್ತ ಬಾಲಕಿಯರನ್ನು ತಪಾಸಣೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸೇರಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿಯ ಅಕ್ರಮ ಸಂಬಂಧ ತಿಳಿದು ಪತಿ ಆಕೆಗೆ ಮಾಡಿದನ್ನು ಕೇಳಿದ್ರೆ ಬೆಚ್ಚಿ ಬೀಳ್ತಿರಾ