Select Your Language

Notifications

webdunia
webdunia
webdunia
webdunia

ದೇವೇಗೌಡರ ಕುಟುಂಬದ ಆಸ್ತಿ ಪೆನ್‌ಡ್ರೈವ್: ಡಿಕೆ ಸುರೇಶ್ ವ್ಯಂಗ್ಯ

D K Suresh

Sampriya

ಬೆಂಗಳೂರು , ಗುರುವಾರ, 2 ಮೇ 2024 (16:43 IST)
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ಸಹೋದರರದ್ದು '420 ಕುಟುಂಬ' ಎಂದಿದ್ದ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಡಿಕೆ ಸುರೇಶ್ ಪ್ರತಿಕ್ರಿಯಿಸಿ,  ದೇವೇಗೌಡರ ಕುಟುಂಬದ ಆಸ್ತಿ ಪೆನ್​ಡ್ರೈವ್, ಇನ್ಮುಂದೆ ತೆನೆ ಹೊತ್ತ ಮಹಿಳೆ ಪೆನ್‌ಡ್ರೈವ್ ಹೊರಬೇಕಾಗುತ್ತದೆ​ ಎಂದು ವ್ಯಂಗ್ಯವಾಡಿದರು.

ನಾನು ‌ಅವರ ಕುಟುಂಬವನ್ನು 420 ಎಂದು ಕರೆಯುವುದಿಲ್ಲ ಎಂದ ಅವರು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಕುಟುಂಬದ ಆಸ್ತಿ ಪೆನ್​​ಡ್ರೈವ್ ಆಗಿದೆ. ಇನ್ನು ತೆನೆ ಹೊತ್ತ ಮಹಿಳೆ ಪೆನ್​ಡ್ರೈವ್ ಹೊರಬೇಕಾಗುತ್ತದೆ. ಇದು ಪೆನ್​​ಡ್ರೈವ್ ಕುಟುಂಬ ಎಂದು ಡಿಕೆ ಸುರೇಶ್​ ಲೇವಡಿ ಮಾಡಿದರು.

ಜೆಡಿಎಸ್‌ನ ಮೈತ್ರಿ ಪಾರ್ಟರ್ನರ್ ಪೆನ್‌​ಡ್ರೈವ್​​ ಬಿಡುಗಡೆ ಮಾಡಿದ್ದು, ಎಚ್‌ಡಿ ಕುಮಾರಸ್ವಾಮಿ ಅವರಿಗೆ ಅವರನ್ನು ಪ್ರಶ್ನೆ ಮಾಡುವ ಧೈರ್ಯವಿಲ್ಲದೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಸುರೇಶ್​ ಕಿಡಿ ಕಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಜರ್ಮನ್‌ನಿಂದ ರಾತೋರಾತ್ರಿ ದುಬೈಗೆ ಬಂದಿಳಿದ ಪ್ರಜ್ವಲ್ ರೇವಣ್ಣ