Select Your Language

Notifications

webdunia
webdunia
webdunia
webdunia

ಭೀಕರ ಅಪಘಾತ ಪತ್ನಿ ಸಾವು, ಪತಿ, ಮಕ್ಕಳು ಗಂಭೀರ

ಭೀಕರ ಅಪಘಾತ ಪತ್ನಿ ಸಾವು, ಪತಿ, ಮಕ್ಕಳು ಗಂಭೀರ
ಬೆಳಗಾವಿ , ಸೋಮವಾರ, 24 ಡಿಸೆಂಬರ್ 2018 (16:34 IST)
ಭೀಕರವಾಗಿ ನಡೆದ ಅಪಘಾತವೊಂದರಲ್ಲಿ ಪತ್ನಿ ಸಾವನ್ನಪ್ಪಿದ್ದು, ಪತಿ ಹಾಗೂ ಮಕ್ಕಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ತುಳಜಾಪೂರದಿಂದ ಹೊರಟಿದ್ದ ಸ್ವಿಪ್ಟ್ ವಿಡಿಐ ಮತ್ತು ಕಬ್ಬಿನ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಕ್ರಾಸ್ ಹತ್ತಿರ ಅಪಘಾತವಾಗಿದ್ದು, ಮಹರಾಷ್ಟ್ರದ ಮುಂಬೈ ಠಾಣೆ ಮೂಲದವರಾದ ಅದೀತಿ ಶೆಳಕೆ (38) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಒಂದೇ ಕುಟುಂಬದ ಮೂವರ ಸ್ಥಿತಿ ಗಂಭೀರವಾಗಿದೆ. ಅದೀತಿಯ ಪತಿ ದೇವೆಂದ್ರ ಶೆಳಕೆ, ಮಕ್ಕಳಾದ
ಅವಧುತ ಶೇಳಕೆ (5) ವರ್ಷ, ಶೃತಿ ಶೆಳಕೆ (11) ವರ್ಷದವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಿರಜ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಐಗಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹತ್ತಾರು ಆನೆಗಳು ಪ್ರತ್ಯಕ್ಷವಾಗಿದ್ದು ಎಲ್ಲಿ ಗೊತ್ತಾ?