Select Your Language

Notifications

webdunia
webdunia
webdunia
webdunia

ತಂಪಾದ ಬೆಂಗಳೂರು: ರಾಜಧಾನಿಯ ಹಲವೆಡೆ ಮಳೆರಾಯನ ಸಿಂಚನ

ತಂಪಾದ ಬೆಂಗಳೂರು: ರಾಜಧಾನಿಯ ಹಲವೆಡೆ ಮಳೆರಾಯನ ಸಿಂಚನ

Sampriya

ಬೆಂಗಳೂರು , ಶನಿವಾರ, 20 ಏಪ್ರಿಲ್ 2024 (16:23 IST)
ಬೆಂಗಳೂರು:  ಬಿಸಿಲ ತಾಪಕ್ಕೆ ಸುಸ್ತಾಗಿದ್ದ ರಾಜ್ಯ ರಾಜಧಾನಿ ಜನತೆಗೆ ಇಂದು ವರುಣ ತಂಪೆರೆದಿದ್ದಾನೆ. ಕಳೆದ ಕೆಲ ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಇಂದು  3 ಗಂಟೆ ವೇಳೆಗೆ ನಗರದ ಹಲವರಡೆ ಗುಡುಗು ಸಹಿತ ಮಳೆಯಾಗಿರುವ ವರದಿಯಾಗಿದೆ.

ಬೆಂಗಳೂರು ನಗರದ ವೈಟ್‌ಫೀಲ್ಡ್, ವರ್ತೂರು, ಸರ್ಜಾಪುರ ರಸ್ತೆ, ಮಾರತ್ತಹಳ್ಳಿ ಹಾಗೂ ಸುತ್ತಮುತ್ತ, ವೈಟ್‌ಫೀಲ್ಡ್, ಮಾರತ್ತಹಳ್ಳಿ, ಬೆಳ್ಳಂದೂರು, ಬೊಮ್ಮನಹಳ್ಳಿಯಲ್ಲಿ ತುಂತುರು ಮಳೆಯಾಗಿದೆ.

ಅಷ್ಟೇ ಅಲ್ಲದೆ ಬಿಟಿಎಂ ಲೇಔಟ್, ಜಯನಗರ, ಕೋರಮಂಗಲ, ಜಯನಗರ, ಜೆ.ಪಿ.ನಗರ, ಎಚ್‌ಎಸ್‌ಆರ್ ಲೇಔಟ್, ಬನಶಂಕರಿ, ಉತ್ತರಹಳ್ಳಿ, ಆರ್‌ ಟಿ ನಗರ, ರಾಜರಾಜೇಶ್ವರಿ ನಗರದಲ್ಲಿ ತುಂತುರು ಮಳೆಯಾಗುತ್ತಿದೆ.

ಸದ್ಯ ಮೋಡ ಕವಿದ ವಾತಾವರಣವಿದ್ದು, ರಾತ್ರಿ ವೇಳೆಯೂ ಮಳೆಯಾಗುವ ಮುನ್ಸೂಚನೆಯಿದೆ. ಇನ್ನೂ ಮಾರ್ಚ್‌ ಆರಂಭದಲ್ಲೇ ರಾಜ್ಯದಲ್ಲಿ  ಬಿಸಿಲ ತಾಪಕ್ಕೆ ಜನರು ಸುಸ್ತಾಗಿದ್ದರು. ಮನೆಯಿಂದ ಹೊರ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದಲ್ಲದೆ ವರುಣನ ಆಗಮನಕ್ಕೆ ರಾಜ್ಯದಾದ್ಯಂತ ಜನ ಕಾಯುತ್ತಿದ್ದರು.  ಒಂದು ವಾರದ ಹಿಂದೆಯೇ ಹವಾಮಾನ ಇಲಾಖೆ ಏಪ್ರಿಲ್‌ 18ರ ಬಳಿಕ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹೇಳಿದ್ದು, ಈ ಭವಿಷ್ಯ ಇದೀಗ ನಿಜವಾಗುತ್ತಾ ಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

23 ವರ್ಷಗಳಿಂದ ಮೋದಿ ರಜೆ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ: ಅಮಿತ್ ಶಾ