Select Your Language

Notifications

webdunia
webdunia
webdunia
webdunia

ಮಾಂಸದೂಟ ಮಾಡಿ ಮಠಕ್ಕೆ ಹೋದ್ರಾ ಎಂದರೆ ಸಿಟ್ಟಾದ ಸಿಎಂ ಸಿದ್ದರಾಮಯ್ಯ

Siddaramaiah

Krishnaveni K

ಬೆಂಗಳೂರು , ಶುಕ್ರವಾರ, 9 ಫೆಬ್ರವರಿ 2024 (08:20 IST)
ಬೆಂಗಳೂರು: ಸುತ್ತೂರು ಮಠಕ್ಕೆ ಭೇಟಿ ನೀಡುವಾಗ ಸಿಎಂ ಸಿದ್ದರಾಮಯ್ಯ ಮಾಂಸದೂಟ ಮಾಡಿ ಹೋಗಿದ್ದರು ಎಂದು ಬಿಜೆಪಿ ಆರೋಪಿಸಿದ್ದು ಸಿಎಂ ಸಿದ್ದು ಮೇಲೆ ಹೊಸ ಆರೋಪದ ಕಿಡಿ ಹತ್ತಿಕೊಂಡಿದೆ.

ಮೊನ್ನೆ ದೆಹಲಿಯಲ್ಲಿ ಪ್ರತಿಭಟನೆ ಬಳಿಕ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿ ಸಿಎಂ ಸಿದ್ದರಾಮಯ್ಯ ಬಾಡೂಟ ಸೇವಿಸಿದ್ದರು. ಅದಾದ ಬಳಿಕ ನೇರವಾಗಿ ಅವರು ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.  ಸುತ್ತೂರು ಜಾತ್ರೆಗೆ ಭೇಟಿ ನೀಡಿ ಗದ್ದುಗೆ ಭೇಟಿ ನೀಡಿದ್ದು ಸರಿಯಲ್ಲ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಸಿಎಂ ಸಿದ್ದರಾಮಯ್ಯ ಗರಂ
ಘಟನೆ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಸಿಎಂ ಸಿದ್ದರಾಮಯ್ಯ ಗರಂ ಆದರು. ಊಟ, ತಿಂಡಿ, ಬಟ್ಟೆ ಹಾಕೋದರ ಬಗ್ಗೆ ಮಾತನಾಡೋಕ್ಕಾಗುತ್ತಾ? ಬಡವರ ಸಮಸ್ಯೆ, ನಿರುದ್ಯೋಗದ ಬಗ್ಗೆ ಎಲ್ಲಾ ಮಾತನಾಡೋಣ ಎಂದು ಗರಂ ಆಗಿ ಪ್ರತಿಕ್ರಿಯಿಸಿದರು.

ಆದರೆ ಸಿದ್ದರಾಮಯ್ಯ ಈ ರೀತಿ ಮಾಂಸಾಹಾರ ಸೇವಿಸಿ ದೇವಾಲಯಕ್ಕೆ ಭೇಟಿ ನೀಡಿದ ಆರೋಪ ಎದುರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೊಮ್ಮೆ ಧರ್ಮಸ್ಥಳಕ್ಕೆ ನಾನ್ ವೆಜ್ ಸೇವಿಸಿ ಹೋಗಿದ್ದರೆಂದು ಭಾರೀ ವಿವಾದಕ್ಕೀಡಾಗಿದ್ದರು. ಈಗ ಮತ್ತೆ ಅದೇ ಆಪಾದನೆ ಸುತ್ತಿಕೊಂಡಿದೆ.

ಬಿಜೆಪಿ ನಾಯಕ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದು, ಇದು ಬಹಳ ದುರದೃಷ್ಟಕರ. ಒಬ್ಬ ಮುಖ್ಯಮಂತ್ರಿಯಾಗಿದ್ದುಕೊಂಡು ತನ್ನ ಸ್ಥಾನ ಮರೆತು ನಡೆದುಕೊಳ್ಳುತ್ತಿದ್ದಾರೆ. ಅವರಿಗೆ ವೈಯಕ್ತಿಕವಾಗಿ ದೇವರ ಬಗ್ಗೆ ಎಷ್ಟು ಭಕ್ತಿ ಭಾವನೆ ಇಟ್ಟುಕೊಂಡಿದ್ದಾರೆ ಎಂಬುದು ಬೇರೆ ಮಾತು. ಆದರೆ ಮು್ಖ್ಯಮಂತ್ರಿಗಳ ನಡೆಯನ್ನು ಸಮಾಜ ಗಮನಿಸುತ್ತದೆ. ಮುಖ್ಯಮಂತ್ರಿಯಾಗಿದ್ದುಕೊಂಡು ಜನರ ಭಾವನೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಾಯಕರಿಗೆ ಬಹಿರಂಗ ಸವಾಲು ಹಾಕಿದ ರೇಣುಕಾಚಾರ್ಯ