Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಆಗಾಗ ಕರ್ನಾಟಕಕ್ಕೆ ಬಂದು ಪ್ರಚಾರ ಮಾಡುತ್ತಿರಲಿ: ಬಿವೈ ವಿಜಯೇಂದ್ರ

BY Vijayendra

Krishnaveni K

ಬೆಂಗಳೂರು , ಶನಿವಾರ, 27 ಏಪ್ರಿಲ್ 2024 (15:11 IST)
ಬೆಂಗಳೂರು: ಸಿದ್ದರಾಮಯ್ಯನವರು ರಾಹುಲ್ ಗಾಂಧಿಯವರನ್ನು ಹೆಚ್ಚು ಹೆಚ್ಚು ಕರ್ನಾಟಕಕ್ಕೆ ಕರೆಸಿ ಪ್ರಚಾರ ಮಾಡಿಸಬೇಕು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸವಾಲೆಸೆದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಘಣ್ಣನವರು ಶಿವಮೊಗ್ಗದಲ್ಲಿ 2.5 ಲಕ್ಷದಿಂದ 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಶಿವಮೊಗ್ಗಕ್ಕೆ ರಾಹುಲ್ ಗಾಂಧಿಯವರು ಬರುವುದರಿಂದ ಇನ್ನೂ 50 ಸಾವಿರ ಹೆಚ್ಚು ಮತದಿಂದ ರಾಘವೇಂದ್ರ ಅವರು ಗೆಲ್ಲುವುದು ಖಚಿತ ಎಂದು ನುಡಿದರು.

ಮೋದಿಯವರಿಗೆ ಅಳುವ ದಿನಗಳು ಬರಲಿವೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆ ಕುರಿತು ಪ್ರಶ್ನಿಸಿದಾಗ, ಅಮೇಥಿಯ ಜನರ ವಿಶ್ವಾಸ ಕಳಕೊಂಡ ರಾಹುಲ್ ಗಾಂಧಿಯವರು ಕೇರಳದ ವಯನಾಡ್ ಕ್ಷೇತ್ರದಲ್ಲಿ ಅಡಗಿ ಕುಳಿತಿದ್ದಾರೆ. ಅಲ್ಪಸಂಖ್ಯಾತರೇ ಬಹುಸಂಖ್ಯಾತರಾಗಿರುವ ವಯನಾಡ್ ಕ್ಷೇತ್ರದಲ್ಲಿ ಅಡಗಿ ಕುಳಿತಿರುವ ಪರಿಸ್ಥಿತಿ ಕಾಂಗ್ರೆಸ್ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿಗೆ ಯಾಕೆ ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯ ಬಂದ ಬಳಿಕ ಅಮೇಥಿ ಜನರು ಗಾಂಧಿ ಕುಟುಂಬಕ್ಕೆ ಆಶೀರ್ವಾದ ಮಾಡುತ್ತಿದ್ದರು. ಅಂಥ ಅಮೇಥಿಯ ಮತದಾರರು ಕಾಂಗ್ರೆಸ್ಸಿನ ಮಹಾನ್ ನಾಯಕÀನನ್ನು ಯಾಕೆ ಧಿಕ್ಕರಿಸಿದ್ದಾರೆ ಎಂದು ಯೋಚನೆ ಮಾಡಲಿ. ನರೇಂದ್ರ ಮೋದಿಜೀ ಏನು? ಅವರ ಜನಪ್ರಿಯತೆ, ಜನಮನ್ನಣೆ ಏನು? ಕಳೆದ 10 ವರ್ಷಗಳಲ್ಲಿ ಮೋದಿಜೀ ಅವರ ಕೊಡುಗೆಗಳು, ಯೋಜನೆಗಳನ್ನು ಮನೆಮನೆಗಳಲ್ಲಿ ಮಾತನಾಡುತ್ತಾರೆ. ರಾಹುಲ್ ಗಾಂಧಿಯವರು ಏನು ಹೇಳುತ್ತಾರೋ ಅವುಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಉತ್ತರಿಸಿದರು.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಬಳಿಕ ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರಿಗೆ ಒಬಿಸಿ ಕೋಟಾದಲ್ಲಿ ಮೀಸಲಾತಿ ನೀಡುವ ಚಿಂತನೆ ಮಾಡಿದೆ. ಇದರಿಂದ ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡುವ ಭಾವನೆ ಮೂಡಿದೆ ಎಂದು ವಿಶ್ಲೇಷಿಸಿದರು.

ನರೇಂದ್ರ ಮೋದಿಯವರ ಜನಪ್ರಿಯತೆ ದಿನೇದಿನೇ ಹೆಚ್ಚಾಗುತ್ತಿದೆ. ನಾಳೆ ಬೆಳಗಾವಿ, ಉತ್ತರಕನ್ನಡ, ದಾವಣಗೆರೆ, ಹೊಸಪೇಟೆಗಳಿಗೆ ಮೋದಿಜೀ ಅವರ ಪ್ರವಾಸ ಇದೆ. ಇದರ ಪರಿಣಾಮ ಮುಂದಿನ 14 ಲೋಕಸಭಾ ಕ್ಷೇತ್ರಗಳ ಚುನಾವಣೆ ಮೇಲೂ ಆಗಲಿದೆ ಎಂದು ನುಡಿದರು. ನಿನ್ನೆ ನಡೆದ 14 ಕ್ಷೇತ್ರಗಳ ಚುನಾವಣೆಯಲ್ಲಿ 14ರಲ್ಲೂ ಬಿಜೆಪಿ ಗೆಲ್ಲುವ ಮಾಹಿತಿ ಬರುತ್ತಿದೆ. ವಾತಾವರಣ ಗಮನಿಸಿದರೆ ರಾಜ್ಯದ 28ರಲ್ಲಿ 28 ಕ್ಷೇತ್ರ ಗೆಲ್ಲುವ ನಮ್ಮ ಗುರಿ ತಲುಪುವುದು ಖಚಿತ ಎಂದು ಹೇಳಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಯತ್ನ ಫಲ ಕೊಡುವುದಿಲ್ಲ. ಬೂಟಾಟಿಕೆಯಿಂದ, ಅಧಿಕಾÀರದ ಅಮಲಿನಲ್ಲಿರುವ ಕಾಂಗ್ರೆಸ್ ಸರಕಾರದ ತೀರ್ಮಾನಗಳು,  ಚಿಂತನೆಗಳು, ನೇಹಾ ಹಿರೇಮಠರ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಸರಕಾರದ ಧೋರಣೆ, ಅಲ್ಪಸಂಖ್ಯಾತರ ತುಷ್ಟೀಕರಣ- ಇವೆಲ್ಲವುಗಳಿಗೆ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಬೆಲೆ ಕಟ್ಟಬೇಕಾಗುತ್ತದೆ. ಒಬಿಸಿ ಕೋಟಾದಡಿ ಅಲ್ಪಸಂಖ್ಯಾತರಿಗೆ ಅವಕಾಶ ಎಂದರೆ ರಾಜ್ಯದ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದಂತೆ ಎಂದು ತಿಳಿಸಿದರು. ಇಂಥ ದುಸ್ಸಾಹಸಕ್ಕೆ ಹೊರಟ ಕಾಂಗ್ರೆಸ್ ಸರಕಾರಕ್ಕೆ ಜನರು ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ಧರಾಮಯ್ಯ, ಡಿಕೆಶಿ ಸರಕಾರದಲ್ಲಿ ಹಿಂದೂಗಳಿಗೆ ರಕ್ಷಣೆಯಿಲ್ಲ: ಬಸನಗೌಡ ಪಾಟೀಲ್