Select Your Language

Notifications

webdunia
webdunia
webdunia
webdunia

ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಬ್ಲಾಸ್ಟ್‌ ಪ್ರಕರಣ ಸಿಲ್ಲಿ ಘಟನೆಯಲ್ಲ - ಸಿಎಂ

ಸಿಎಂ ಸಿದ್ದರಾಮಯ್ಯ

geetha

bangalore , ಭಾನುವಾರ, 3 ಮಾರ್ಚ್ 2024 (14:22 IST)
ಚಿಕ್ಕಮಗಳೂರು :ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕೆಂದು ಬಿಜೆಪಿ ಒತ್ತಾಯಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ, ಈಗಾಗಲೇ ಪ್ರಕರಣವನ್ನು ಸಿಸಿಬಿ ತನಿಖೆಗೆ ನೀಡಲಾಗಿದೆ. ಎನ್‌ಐಎ ತನಿಖೆಗ ಒಳಪಡಿಸುವ ಅಗತ್ಯ ಇನ್ನೂ ಕಂಡುಬಂದಿಲ್ಲ. ಅಗತ್ಯ ಬಿದ್ದರೆ ಎನ್‌ಐಎ ತನಿಖೆಗೆ ನೀಡಲಾಗುವುದು ಎಂದರು. 
 
ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಬ್ಲಾಸ್ಟ್‌ ಪ್ರಕರಣ ಸಿಲ್ಲಿ ಘಟನೆಯಲ್ಲ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಇದೊಂದು ಸಿಲ್ಲಿ ಘಟನೆ ಎಂದು ಹೇಳಿಕೆ ನೀಡಿರುವ ಕುರಿತು ಚಿಕ್ಕಮಗಳೂರಿನಲ್ಲಿ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣವನ್ನು ಎಲ್ಲ ಆಯಾಮಗಳಿಂದ ತನಿಖೆಗೊಳಪಡಿಸಲಾಗಿದೆ ಎಂದರು. 

ಬ್ರಾಂಡ್‌ ಬೆಂಗಳೂರು ಬಾಂಬ್‌ ಬೆಂಗಳೂರು ಆಗಿದೆ ಎಂಬ ಬಿಜೆಪಿಯವರ ಆರೋಪ ನಿರಾಧಾರವಾಗಿದೆ. ಬಿಜೆಪಿ ಅವಧಿಯಲ್ಲಿ ಬಾಂಬ್‌ ಸ್ಫೋಟ ನಡೆದಾಗ ಏನಾಗಿತ್ತು ಎಂದು ಪ್ರಶ್ನಿಸಿದ ಸಿಎಂ 2008 ರಿಂದ ನಾಲ್ಕು ಬಾರಿ ಬಾಂಬ್‌ ದಾಳಿ ನಡೆದಿದೆ. ಎನ್‌ಐಎ , ರಾ, ಐಡಿ ಎಲ್ಲಾ ಯಾರ ಅಧೀನದಲ್ಲಿದೆ. ನಾನು ಬಾಂಬ್‌ ಸ್ಫೋಟವನ್ನು ಸಮರ್ಥಿಸಿಕೊಳ್ಳುವುದಿಲ್ಲ. ಅದನ್ನು ಖಂಡಿಸುತ್ತೇನೆ. ಆದರೆ ಈ ವಿಷಯದಲ್ಲಿ ಬಿಜೆಪಿಯವರು ರಾಜಕೀಯ ಮಾಡಬಾರದು ಎಂದು ಟೀಕಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಕರಣವನ್ನ ಭೇದಿಸುತ್ತೇವೆ- ಪರಮೇಶ್ವರ್