Select Your Language

Notifications

webdunia
webdunia
webdunia
webdunia

ಸರ್ಕಾರದ ವಿರುದ್ಧ ಸಿಡಿದೆದ್ದ ಬಿಸಿಯೂಟ ನೌಕರರು

ಸರ್ಕಾರದ ವಿರುದ್ಧ ಸಿಡಿದೆದ್ದ ಬಿಸಿಯೂಟ ನೌಕರರು
bangalore , ಶುಕ್ರವಾರ, 3 ನವೆಂಬರ್ 2023 (14:21 IST)
ಸರ್ಕಾರದ ವಿರುದ್ಧ ಬಿಸಿಯೂಟ ಕಾರ್ಯಕರ್ತರ ಹೋರಾಟ  ನಾಲ್ಕನೇ ದಿನಕ್ಕೆ ಕಾಲಿಟ್ಟಿದು,ಇಂದು ಕೂಡ ಫ್ರೀಡಂ ಪಾರ್ಕ್ ನಲ್ಲಿ ಬಿಸಿಯೂಟ ಕಾರ್ಯಕರ್ತರ ಅನಿರ್ಧಿಷ್ಠಾವಧಿ ಪ್ರತಿಭಟನೆ ಮುಂದುವರೆದಿದೆ.ಚಳಿ ಗಾಳಿ ಎನ್ನದೇ ರಾತ್ರಿಯಲ್ಲಾ ಫ್ರೀಡಂ ಪಾರ್ಕ್ ನಲ್ಲಿ ಮಹಿಳಾ ಪ್ರತಿಭಟನಕಾರರು ಮಲಗಿದ್ದಾರೆ.
 
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಕಾರ್ಯಕರ್ತರು ಮುಂದಾಗಿದ್ದಾರೆ.ನಿತ್ಯ ಜಿಲ್ಲೆವಾರು ಪ್ರತಿಭಟನೆಗೆ ಕರೆಕೊಟ್ಟಿದ್ದು,ಇಂದೂ ಕೂಡ ವಿವಿಧ ಜಿಲ್ಲೆಯಿಂದ ಹೋರಾಟಗಾರರು ಆಗಮಿಸಿದ್ದಾರೆ.
 
ಪ್ರತಿದಿನ ಒಂದೊಂದು ಜಿಲ್ಲೆಯ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು,ಪ್ರತಿಭಟನೆಯಲ್ಲಿ ಭಾಗಿಯಾಗದ ಜಿಲ್ಲೆಯಲ್ಲಿ ಆ ದಿನ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸಂಪೂರ್ಣ ಬಂದ್ ಆಗಲಿದೆ.ದೀಪಾವಳಿವರೆಗೆ ಬೇಡಿಕೆ ಈಡೇರಿಕೆಗೆ ಪ್ರತಿಭಟನಾಕಾರರು ಡೆಡ್ ಲೈನ್ ಕೊಟ್ಟಿದ್ದಾರೆ.ಬೇಡಿಕೆ ಈಡೇರದಿದ್ದರೆ ಏಕ ಕಾಲಕ್ಕೆ ರಾಜ್ಯವ್ಯಾಪಿ ಬಿಸಿಯೂಟ ಸ್ಥಗಿತಗೊಳಿಸುವ ಎಚ್ಚರಿಕೆ ಪ್ರತಿಭಟನಾಕಾರರು ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ