Select Your Language

Notifications

webdunia
webdunia
webdunia
webdunia

ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಬಿಗ್ಬಾಸ್‌ ವಿನ್ನರ್ ರೂಪೇಶ್: ಇದೊಂದು ಅದ್ಭುತ ಕ್ಷಣ ಎಂದಿದ್ದೇಕೆ!

ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಬಿಗ್ಬಾಸ್‌ ವಿನ್ನರ್ ರೂಪೇಶ್: ಇದೊಂದು ಅದ್ಭುತ ಕ್ಷಣ ಎಂದಿದ್ದೇಕೆ!

Sampriya

ಮಂಗಳೂರು , ಸೋಮವಾರ, 18 ಮಾರ್ಚ್ 2024 (15:26 IST)
Photo Courtesy Facebook
ಮಂಗಳೂರು: ತುಳು ಗಿರಿಗಿಟ್ ಖ್ಯಾತಿಯ ಕನ್ನಡ ಬಿಗ್‌ಬಾಸ್ ವಿನ್ನರ್, ನಟ ರೂಪೇಶ್ ಶೆಟ್ಟಿ ಅವರು ತಮಿಳು ಚಿತ್ರ ಸನ್ನಿಧಾನಮ್ P. O ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.
 
ಈ ಖುಷಿಯ  ವಿಚಾರವನ್ನು ತಮಿಳಿನ ಸೂಪರ್ ಸ್ಟಾರ್ ಹಾಸ್ಯ ನಟ ಯೋಗಿ ಬಾಬು ಅವರ ಜತೆಗಿರುವ ಫೋಟೋವನ್ನು ಹಂಚಿಕೊಂಡು ಇದೊಂದು ಅದ್ಭುತ ಕ್ಷಣ ಎಂದು ರೂಪೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
 
ಇಂದು ತುಂಬಾ ಖುಷಿಯ ದಿವಸ ❤️ ನಿಮ್ಮೆಲ್ಲರ ಆಶೀರ್ವಾದ ಹಾಗೂ ಪ್ರೋತ್ಸಾಹದಿಂದ ಇಂದು ಒಂದು ಅದ್ಭುತ ತಂಡದ ಜತೆಗೆ "ಸನ್ನಿಧಾನಮ್ P. O" ಎನ್ನುವ ನನ್ನ ಮೊದಲ ತಮಿಳು ಚಿತ್ರ ಮಾಡುವ ಅವಕಾಶ ದೊರಕಿದೆ ❤️ ತಮಿಳಿನ ಸೂಪರ್ ಸ್ಟಾರ್ ಹಾಸ್ಯ ನಟರಾದ ಯೋಗಿ ಬಾಬು ಅವರ ಜತೆ ನಟಿಸುವ ಅವಕಾಶ ನನ್ನ ಪಾಲಿಗೆ ದೊಡ್ಡ ಹೆಮ್ಮೆ ❤️ ನಿಮ್ಮ ಆಶೀರ್ವಾದ ಸದಾ ಇರಲಿ ಎಂದು ಬರೆದುಕೊಂಡಿದ್ದಾರೆ.
 
ಕನ್ನಡ ಬಿಗ್ ಬಾಸ್ ನ ಒಟಿಟಿ ಸೀಸನ್ 1ರಲ್ಲಿ ಭಾಗವಹಿಸಿದ್ದ ರೂಪೇಶ್ ಶೆಟ್ಟಿ, ಮೊದಲ ಒಟಿಟಿ ಸೀಸನ್‌ನ ವಿನ್ನರ್‌ ಆಗಿ ಹೊರಹೊಮ್ಮಿದ್ದರು. ಈ ಮೂಲಕ ಟಿವಿ ಸೀಸನ್​​​​ಗೆ ಆಯ್ಕೆಯಾಗಿದ್ದರು.  ಬಿಗ್ ಬಾಸ್ ಸೀಸನ್ ೯ರಲ್ಲೂ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. 
 
ಇದೀಗ ಕನ್ನಡ ಹಾಗೂ ತಮಿಳು ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

'ಸಂಕಲ್ಪ ಪತ್ರಕ್ಕೆ ನಿಮ್ಮ ಸಲಹೆ' ಕಾರ್ಯಕ್ರಮ: ಯದುವೀರರನ್ನು ಭೇಟಿಯಾದ ಸಂಸದ ಪ್ರತಾಪ್ ಸಿಂಹ