Select Your Language

Notifications

webdunia
webdunia
webdunia
webdunia

ಗುಂಟೂರು ಮೆಣಸಿನಕಾಯಿ ಬಳಸುವ ಮುನ್ನ ಎಚ್ಚರ; ಕ್ಯಾನ್ಸರ್ ಕಾರಕ ಅಂಶ ಪತ್ತೆ

ಗುಂಟೂರು ಮೆಣಸಿನಕಾಯಿ ಬಳಸುವ ಮುನ್ನ ಎಚ್ಚರ; ಕ್ಯಾನ್ಸರ್ ಕಾರಕ ಅಂಶ ಪತ್ತೆ
ಬೆಂಗಳೂರು , ಮಂಗಳವಾರ, 1 ಜನವರಿ 2019 (07:37 IST)
ಬೆಂಗಳೂರು : ಗುಂಟೂರು ಮೆಣಸಿನಕಾಯಿ ಖಾರವಾಗಿರುತ್ತದೆ ಎಂದು ಎಲ್ಲರು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಈ ಮೆಣಸಿನ ಕಾಯಿಯ ಬಳಕೆ ಮಾಡೋರಿಗೆ ಒಂದು ಶಾಕಿಂಗ್ ನ್ಯೂಸ್.


ಅದೇನೆಂದರೆ ಗುಂಟೂರು ಮೆಣಸಿನ ಕಾಯಿ ಮಾದರಿಯಲ್ಲಿ ಕ್ಯಾನ್ಸರ್ ತರಬಲ್ಲ ವಿಷಕಾರಿ ಎಫ್ಲಾಟಾಕ್ಸಿಗಳ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿರುವುದು ವರದಿ ಆಗಿದೆ. ಕೆಲವು ಸೂಕ್ಷ್ಮಾಣು ಜೀವಿಗಳಿಂದ ಉತ್ಪಾದನೆಗೊಳ್ಳುವ ವಿಷಕಾರಿ ಮತ್ತು ಅಪ್ಲಾಟಾಕ್ಸಿನ್ ನ ಕುರುಹುಗಳು ಗುಂಟೂರು ನಗರದಿಂದ ಸಂಗ್ರಹಿಸಲಾದ ಮೆಣಸಿನಕಾಯಿ ಮಾದರಿಯಲ್ಲಿ ಪತ್ತೆಯಾಗಿದೆ ಎಂದು ಏಷ್ಯನ್ ಜರ್ನಲ್ ಆಫ್ ಪಾರ್ವಸಿಟಿಕ್ಸ್ ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.


ಮಚಲಿಪಟ್ಟಣಂನಲ್ಲಿನ ಕೃಷ್ಣ ವಿಶ್ವವಿದ್ಯಾಲಯದ ಸಂಶೊಧಕರು, ಅಧ್ಯಯನಕ್ಕಾಗಿ ವಿಜಯವಾಡ ನಗರದ ಅಂಗಡಿಗಳು, ಮನೆಗಳು, ಸೂಪರ್ ಮಾರ್ಕೆಟ್, ಗುಂಟೂರಿನ ಮಾರುಕಟ್ಟೆಗಳಿಂದ ಮೆಣಸಿನಕಾಯಿಗಳನ್ನು ಸಂಗ್ರಹಿಸಿದ್ದಾರೆ. ಏಳು ಮಾದರಿ ಪೈಕಿ ಐದರಲ್ಲಿ ಅಪ್ಲಾಟಾಕ್ಸಿನ್ ಜಿ1, ಜಿ2, ಬಿ2 ಅಂಶ ಪತ್ತೆಯಾಗಿದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಸಾಜ್ ಮಾಡಿಸಿಕೊಳ್ಳಲು ಬಂದ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಯುವಕ