Select Your Language

Notifications

webdunia
webdunia
webdunia
webdunia

ಶಿವಸೇನಾಗೆ ಸೇರಿದ ನಟ ಗೋವಿಂದ: 14 ವರ್ಷದ ನಂತರ ಮತ್ತೇ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್‌ ನಟ

Govinda

Sampriya

ಮುಂಬೈ , ಗುರುವಾರ, 28 ಮಾರ್ಚ್ 2024 (18:53 IST)
photo Courtesy Instagram
ಮುಂಬೈ: ಬಾಲಿವುಡ್‌ನ ಖ್ಯಾತ ಹಿರಿಯ ನಟ ಗೋವಿಂದ ಅವರು ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಸಮ್ಮುಖದಲ್ಲಿ ಶಿವಸೇನಾಗೆ ಸೇರ್ಪಡೆಗೊಂಡರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 14 ವರ್ಷದ ಬಳಿಕ ಮತ್ತೇ ರಾಜಕೀಯಕ್ಕೆ ಬಂದಿದ್ದೇನೆ. ವ್ಯಕ್ತಿಕವಾಗಿ ತುಂಬಾ ಖುಷಿ ನೀಡಿದೆ . 2004 ರಿಂದ 2009 ರವರೆಗೆ ನಾನು ರಾಜಕೀಯದಲ್ಲಿದ್ದೆ. 14ನೇ ಲೋಕಸಭೆಗೆ 2009ರಲ್ಲಿ ಚುನಾವಣೆ ನಡೆದಿತ್ತು. ಕಾಕತಾಳೀಯವೆಂದರೆ 14 ವರ್ಷದ ನಂತರ ಮತ್ತೆ ನಾನು ರಾಜಕೀಯ ಜೀವನಕ್ಕೆ ಮರಳಿದ್ದೇನೆ ಎಂದರು.

2004 ಲೋಕಸಭಾ ಚುನಾವಣೆಯಲ್ಲಿ ಮುಂಬೈ ವಿರಾರ್ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ನಿಂದ ಸ್ಪರ್ಧಿಸಿ ಸುಮಾರು 50 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದರು. ಆದರೆ ವೃತ್ತಿಜೀವನದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ಆಗದ ಕಾರಣ ಸಂಸದ ಸ್ಥಾನಕ್ಕೆ ಅವಧಿಗೂ ಮುನ್ನವೇ ರಾಜೀನಾಮೆ ನೀಡಿದ್ದರು.

ಆ ನಂತರ ಬಣ್ಣದ ಬದುಕಿನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಇದೀಗ 14 ವರ್ಷದ ಬಳಿಕ ರಾಜಕೀಯಕ್ಕೆ ಬಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಹಜವಾಗಿ ನನ್ನ ಕುಟುಂಬಕ್ಕೆ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ: ಸಚಿವ ಕೆ.ಎಚ್‌.ಮುನಿಯಪ್ಪ