Select Your Language

Notifications

webdunia
webdunia
webdunia
webdunia

ಫ್ಯಾನ್ಸ್​​ ಜೊತೆ ರಿಷಬ್​​ ಶೆಟ್ಟಿ ಹುಟ್ಟುಹಬ್ಬ

ಫ್ಯಾನ್ಸ್​​ ಜೊತೆ ರಿಷಬ್​​ ಶೆಟ್ಟಿ ಹುಟ್ಟುಹಬ್ಬ
bangalore , ಬುಧವಾರ, 5 ಜುಲೈ 2023 (20:20 IST)
ಕಾಂತಾರಾ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಬಂಗಾರದ ಬೆಳೆ ತೆಗೆದು, ದೇಶಾದ್ಯಂತ ಸಖತ್​ ಸದ್ದು ಮಾಡಿತ್ತು. ಕಾಂತಾರ ಸೃಷ್ಟಿಕರ್ತ, ನಟ, ನಿರ್ದೇಶಕ ರಿಷಬ್​​ ಶೆಟ್ಟಿ ಅಂದಿನಿಂದ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಹೊರಹೊಮ್ಮಿದ್ರು. ಇದೀಗ ರಿಷಬ್​ ಶೆಟ್ಟಿಯವರ ಹುಟ್ಟುಹಬ್ಬ ಸನಿಹದಲ್ಲಿದ್ದು, ತಮ್ಮ ಬರ್ತಡೇಯನ್ನು ನೆಚ್ಚಿನ ಅಭಿಮಾನಿಗಳ ಜೊತೆಯಲ್ಲಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದೇ 7ನೇ ತಾರೀಕು ರಿಷಬ್​ ಶೆಟ್ಟಿ ಅವರ ಹುಟ್ಟುಹಬ್ಬ. ಹಾಗಾಗಿ ಬೆಂಗಳೂರಿನ ನಂದಿ ಲಿಂಕ್​ ಗ್ರೌಂಡ್​ನಲ್ಲಿ ಮಧ್ಯಾಹ್ನ 3 ಗಂಟೆಗೆ, ನಿಮ್ಮ ಜೊತೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಕಾಯುತ್ತಿರುತ್ತೇನೆ ಎಂದು ಅಭಿಮಾನಿಗಳಿಗೆ ರಿಷಬ್​ ವಿಡಿಯೋ ಸಂದೇಶ ರವಾನಿಸಿದ್ದಾರೆ. ಇನ್ನು ಕೆಜಿಎಫ್​ ರಿಲೀಸ್​ ನಂತ್ರ ರಾಕಿಂಗ್​ ಸ್ಟಾರ್​ ಯಶ್​, ಇದೇ ಗ್ರೌಂಡ್​ನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ರು. ಇದೀಗ ರಿಷಬ್​ ಇದೇ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು, ಕಾಂತಾರಾ-2 ಚಿತ್ರದ ಪ್ರಚಾರಕ್ಕೆ ನಾಂದಿ ಹಾಡಲು ನಿರ್ಧರಿಸಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಗ್ಯಾರಿ ಸೋಬರ್ಸ್ ಗೆ ಟೀಂ ಇಂಡಿಯಾ ಆಟಗಾರರನ್ನು ಪರಿಚಯಿಸಿದ ರಾಹುಲ್ ದ್ರಾವಿಡ್