Select Your Language

Notifications

webdunia
webdunia
webdunia
webdunia

‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದಲ್ಲಿ ಅಂಬರೀಶ್ ರವರಿಗೆ ಜೋಡಿಯಾಗಿ ನಟಿಸುತ್ತಿರುವವರು ಯಾರು ಗೊತ್ತಾ..?

‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದಲ್ಲಿ ಅಂಬರೀಶ್ ರವರಿಗೆ ಜೋಡಿಯಾಗಿ ನಟಿಸುತ್ತಿರುವವರು ಯಾರು ಗೊತ್ತಾ..?
ಬೆಂಗಳೂರು , ಶುಕ್ರವಾರ, 13 ಏಪ್ರಿಲ್ 2018 (09:08 IST)
ಬೆಂಗಳೂರು : ರೆಬಲ್ ಸ್ಟಾರ್ ಅಂಬರೀಶ್ ಅವರು ಅಭಿನಯಿಸುತ್ತಿರುವ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದಲ್ಲಿ ಅಂಬರೀಶ್ ಅವರಿಗೆ ಜೋಡಿಯಾಗಿ ಯಾರು ನಟಿಸುತ್ತಾರೆ ಎಂಬ ಗೊಂದಲ ಹಲವರಲಿದ್ದು, ಆದರೆ ಇದೀಗ ನಾಯಕಿ ಆಯ್ಕೆಯಾಗಿದ್ದಾರೆ.


ಹೌದು. ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದಲ್ಲಿ ಅಂಬರೀಶ್ ಅವರಿಗೆ ಜೊಡಿಯಾಗಿ ಮೊದಲು ಸುಹಾಸಿನಿ ಅವರ ಹೆಸರು ಕೇಳಿ ಬಂದಿತ್ತಾದರೂ, ನಂತರದಲ್ಲಿ ಖುಷ್ಬು ಅಥವಾ ರಮ್ಯಾಕೃಷ್ಣ ಇವರಲ್ಲಿ ಒಬ್ಬರು ನಟಿಸುವುದಾಗಿ ಹೇಳಲಾಗಿತ್ತು. ಆದರೆ ಅವರಿಬ್ಬರ ಜೊತೆಗೂ ಡೇಟ್ಸ್ ಹೊಂದಾಣಿಕೆಯಾಗದೇ ಕೊನೆಗೆ ಅಂಬರೀಶ್ ಅವರ ಧರ್ಮಪತ್ನಿ ಸುಮಲತಾ ಅವರು ನಟಿಸುತ್ತಾರೆ ಎಂಬ ಸುದ್ದಿ ಹರಿದಾಡಿತ್ತು.


ಆದರೆ ಇದೀಗ ನಟಿ ಸುಹಾಸಿನಿ ಅವರನ್ನೇ ಚಿತ್ರತಂಡ ಮತ್ತೆ ಆಯ್ಕೆಮಾಡಿದೆ. ಈ ಚಿತ್ರದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದ್ದು, ನಟಿ ಸುಹಾಸಿನಿ ಅವರು ಈಗಾಗಲೇ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರವಿಚಂದ್ರನ್ ರವರ ಸೂಚನೆ ಮೇರೆಗೆ ಸೀಜರ್ ಚಿತ್ರದ ಡೈಲಾಗ್ ಗೆ ಕತ್ತರಿ ಹಾಕಿದ ನಿರ್ದೇಶಕ