Select Your Language

Notifications

webdunia
webdunia
webdunia
webdunia

ಸನ್ನಿಲಿಯೋನ್ ಹಾಟೆಸ್ಟ್ ಮ್ಯಾನ್ ಯಾರು ಗೊತ್ತೇ ?

ಸನ್ನಿಲಿಯೋನ್ ಹಾಟೆಸ್ಟ್ ಮ್ಯಾನ್ ಯಾರು ಗೊತ್ತೇ ?
, ಸೋಮವಾರ, 6 ಜುಲೈ 2015 (10:15 IST)
ಸನ್ನಿಲಿಯೋನ್ ಈಗ ಬಾಲಿವುಡ್ ಅಲ್ಲದೆ ಭಾರತೀಯ ಚಿತ್ರ ಪ್ರೇಕ್ಷಕರಿಗೆ ಅತ್ಯಂತ ಪರಿಚಿತ ಹೆಸರು. ಆಕೆ ಜಿಸ್ಮ್ 2, ರಾಗಿಣಿ ಎಂಎಂಎಸ್  2  ಚಿತ್ರಗಳಲ್ಲಿ ಮಾತ್ರವಲ್ಲ ಇನ್ನು ಹಲವಾರು ಸಿನಿಮಾಗಳಲ್ಲಿ ನಟಿಸಿ ರಸಿಕರ ಮನ ಗೆದ್ದಿದ್ದಾರೆ. ಈಗ ಆಕೆಯ ಕನಸು ಬಾಲಿವುಡ್ ನಲ್ಲಿರುವ  ಸ್ಟಾರ್ ನಟರ ಜೊತೆ ನಟಿಸುವುದಾಗಿದೆ!
ಸನ್ನಿ ಲಿಯೋನ್ ಬಗ್ಗೆ ಭಾರತ ಐಟಂ ಗರ್ಲ್ ರಾಖಿ ಸಾವಂತ್ ಸಿಟ್ಟಿಗೆದ್ದು ತನಗೆ ತೋಚಿದ್ದು ಹೇಳಿದ್ದಾರೆ ಸನ್ನಿ ಬಗ್ಗೆ. ಇದರ ಬಗ್ಗೆ ಸನ್ನಿ ಪ್ರತಿಕ್ರಿಯಿಸಿರುವುದು ಹೀಗೆ..ಈ ಸಿನಿಮಾ ರಂಗಕ್ಕೆ ಬಂದಾಗ ಅನೇಕ ಚಿತ್ರಗಳಲ್ಲಿ ನಟಿಸಿರುವ ಕಲಾವಿದರ ಜೊತೆ ಅಭಿನಯಿಸುವ ಆಸೆ ಎಲ್ಲರಿಗೂ ಇರುತ್ತದೆ. ನಾನು ಬಾಲಿವುಡ್ ಚಿತ್ರಗಳ ಬಗ್ಗೆ ವಿಶೇಷವಾಗಿ ಆಸಕ್ತಿ ಹೊಂದಿದ್ದೇನೆ .ಅದೇರೀತಿ ನನಗೂ ಸಹ ಸ್ಟಾರ್ ನಟರ ಜೊತೆ ನಟಿಸುವ ಕನಸಿದೆ ಎಂದಿದ್ದಾರೆ. 
 
ನಾನು ನನಗೆ ದೊರೆತ ಯಾವುದೇ ಪಾತ್ರವಾದರೂ ಸರಿಯೇ ಅದಕ್ಕೆಂದು ಬಹಳ ಕಷ್ಟ ಪಡುತ್ತೇನೆ. ನನ್ನ ಅಭಿಮಾನಿಗಳ ಆಶಯಕ್ಕೆ ತಕ್ಕಂತೆ ನಾನು ಅದರಲ್ಲಿ ನಟಿಸಿರುತ್ತೇನೆ. ನನ್ನ ನಟನೆ ಅವರಿಗೆ ತಲುಪುವಂತಿರ ಬೇಕೆಂದು ಬಯಸುತ್ತೇನೆ ಎಂದಿದ್ದಾರೆ. 
ನಾನೇನಾದರೂ ಡೆನಿಯಲ್ ವೆಬ್ಬರ್ ಜೊತೆ ಮದುವೆ ಆಗದೆ ಇದ್ದಿದ್ದರೆ ಖಂಡಿತವಾಗಿ  ಬ್ರಾಡ್ ಪಿಟ್ ಅವರ ಜೊತೆ ಡೇಟಿಂಗ್ ಮಾಡ್ತಾ ಇದ್ದೆ. ಅವರು ಜಗತ್ತಿನ ಅತ್ಯಂತ ಹಾಟೆಸ್ಟ್ ಮ್ಯಾನ್ ಎಂದಿದ್ದಾರೆ ಸನ್ನಿ. 

Share this Story:

Follow Webdunia kannada